ಕೋಣನಕುಂಟೆಯಿಂದ ಕಾಣೆ ಯಾಗಿರುವ ಬಾಲಕಿ

ಬೆಂಗಳೂರು, ಫೆ.7-ಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಿಂದ ಜಯಲಕ್ಷ್ಮಿ (10)ಅಲಿಯಾಸ್ ಸೋನು ಎಂಬ ಬಾಲಕಿ ಕಾಣೆಯಾಗಿದ್ದು, ಈ ಬಾಲಕಿ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆಕೂಡಲೇ ಸಮೀಪz Àಠಾಣೆಗೆ ತಿಳಿಸಲು ಮನವಿ ಮಾಡಲಾಗಿದೆ.
ಜೆಎಸ್‍ಎಸ್ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈ ಬಾಲಕಿ ಫೆ.1ರಂದು ಮಧ್ಯಾಹ್ನ ಒಂದುಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾಳೆ.
ಮಗಳನ್ನು ಯಾರೋ ಅಪಹರಿಸಿದ್ದಾರೆಂದು ಬಾಲಕಿ ತಾಯಿ ಅನುಮಾನ ವ್ಯಕ್ತಪಡಿಸಿ ಕೋಣನಕುಂಟೆ ಪೆÇಲೀಸರಿಗೆದೂರು ನೀಡಿದ್ದಾರೆ.
ಈ ಬಾಲಕಿಯ ಬಲತೋಳಿನ ಮೇಲೆ ದೊಡ್ಡದಾದಕಪ್ಪು ಮಚ್ಚೆ ಇದ್ದು, ಕನ್ನಡ ಮತ್ತುತೆಲುಗು ಭಾಷೆ ಬಲ್ಲವಳಾಗಿದ್ದಾಳೆ.ಈ ಬಾಲಕಿ ಬಗ್ಗೆ ಸುಳಿವಿದ್ದಲ್ಲಿ ಕೂಡಲೇ ಕಂಟ್ರೋಲ್‍ ರೂಂಗಾಗಲೀ ಅಥವಾ ಸಮೀಪದ ಠಾಣೆಗಾಗಲಿ ತಿಳಿಸಲು ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ