ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

ಬೆಂಗಳೂರು, ಫೆ.7- ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 5 ಲಕ್ಷ ಮೌಲ್ಯದ 75 ಗ್ರಾಂಕೊಕೈನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದಕ್ರಿಸ್ಟನ್ (32) ಬಂಧಿತಆರೋಪಿಯಾಗಿದ್ದು, ಈತ ಬಿಜಿನೆಸ್ ವೀಸಾದಡಿ ಭಾರತಕ್ಕೆ ಬಂದು ಮುಂಬೈ ನಗರದಲ್ಲಿ ವಾಸವಾಗಿದ್ದುಕೊಂಡು ಪಾಸ್‍ಪೆÇೀರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಹುದ್ದೆಗಳಲ್ಲಿ ಭಾಗಿಯಾಗಿದ್ದನು.
ಮಾದಕ ವಸ್ತು ಕೊಕೈನ್‍ಅನ್ನುತನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಿಅಕ್ರಮ ಹಣ ಸಂಪಾದನೆ ಮಾಡುತ್ತ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ.
ಕೆಆರ್ ಪುರಂ ವ್ಯಾಪ್ತಿಯ ಕಿತ್ತಗನೂರು ಮುಖ್ಯರಸ್ತೆ, ಗಾರ್ಡನ್ ಸಿಟಿ ಕಾಲೇಜು ಬಳಿ ಇರುವ ಶಿಶು ಮಂದಿರ್‍ಎದುರು ಈತಕೊಕೈನ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಅಪರಾಧ ವಿಭಾಗದಅಪರ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್, ಉಪ ಪೆÇಲೀಸ್ ಆಯುಕ ್ತಗಿರೀಶ್, ಸಿಸಿಬಿಯ ಮೋಹನ್ ಕುಮಾರ್ ಮಾರ್ಗ ದರ್ಶನದಲಿ ್ಲಆರೋಪಿಯನ್ನು ಬಂಧಿಸಿದ್ದು, ಈ ಸಂಬಂಧಕೆಆರ್ ಪುರಂಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ