ಶಾರದ ಚಿಟ್ಪಂಡ್ ವ್ಯವಹಾರ ಹಗರಣ ಸಂಬಂಧ, ಕೋಲ್ಕತಾ ಪೊಲೀಸ್ ಕಮೀಷನರ್ ವಿರುದ್ಧ ಸಿಬಿಐ ಕ್ರಮ ವಿರೋಧಿಸಿ ವಿರೋದ ಪಕ್ಷಗಳು ಸದನದಲ್ಲಿ ಅಡ್ಡಿಪಡಿಸಿದ ಹಿನ್ನಲೆ ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು.
ಇಂದು ಬೆಳಿಗ್ಗೆ ಕಲಾಪ ಆರಂಬವಾಗುತ್ತಿದ್ದಂತೆ ಟಿಎಂಸಿ ಸಂಸದ ಡೆರೆತ್ ಒ’ ಬ್ರಿಯೆನ್ ಈ ವಿಷಯದ ಬಗ್ಗೆ ಚರ್ಚಿಸಲು ಪ್ರಯತ್ನಿಸಿದರು. ಅದರೆ, ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅನುಮತಿ ನಿರಾಕರಿಸಿದ ಹಿನ್ನಲೆ, ಟಿಎಂಸಿ ನೇತೃತ್ವದಲ್ಲಿ ವಿರೋದ ಪಕ್ಷಗಳ ಸದಸ್ಯರು ಪ್ರತಿಭಟನೆ ಪ್ರಾರಂಭಿಸಿದರು.
ಪ್ರತಿಭಟನಾಕಾರ ಸದಸ್ಯರಿಗೆ ತಿರುಗೇಟು ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್, ಚಿಟ್ ಪಂಡ್ನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸದಂತೆ ಸಿಬಿಐನ್ನು ಅಲ್ಲಿನ ಸರ್ಕಾರ ತಡೆಗಟ್ಟಿದೆ ಎಂದು ಹೇಳಿದರು. ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸಿಬಿಐ ಅಧಿಕಾರಗಳ ಬಂಧನ ಅಸಂವಿಧಾನಿಕ ಎಂದು ಸಚಿವರು ಹೇಳಿದರು.
ರಾಷ್ಟ್ರಪತಿಗಳು ಸದನದಲ್ಲಿ ಮಾಡಿದ ಭಾಷಣ ಮತ್ತು ಕೇಂದ್ರ ಬಜೆಟ್ ಮೇಲಿನ ನಡೆದ ಚರ್ಚೆ ಸಂಬಂಧ ಸದನದ ಸದಸ್ಯರಿಗೆ ಧನ್ಯವಾದ ಹೇಳಿದರು. ಗದ್ದಲ ಮುಂದುವರೆದ ಕಾರಣ ಸದನವನ್ನು 2 ಗಂಟೆಗೆ ಮುಂದೂಡಲಾಯಿತು.
ಇದಕ್ಕೂ ಮೊದಲು ಸದನದಲ್ಲಿ ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ನಾನಾಜಿ ದೇಶ್ಮುಖ್ ಹಾಗೂ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಕುಲ್ದೀಪ್ ನಯ್ಯರ್, ಹಮ್ದೇವ್ ನಾರಾಯಣ್ ಯಾದವ್ ಮತ್ತು ಸುಖದೇವ್ ಸಿಂಗ್ ದಿಂಡಸಾ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.