ಲೋಕಸಭಾ ಚುನಾವಣೆ: ಹೊಸ ಘೋಷವಾಕ್ಯ ಬಿಡಿಗಡೆಗೊಳಿಸಿದ ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷದಲ್ಲಿ ಬರದ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಬಿಜೆಪಿ ಹೊಸ ಘೋಷವಾಕ್ಯ ಬಿಡುಗಡೆಮಾಡಿದ್ದು, ಈ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದೆ.

2014ರ ಚುನಾವಣೆಯಲ್ಲಿ ‘ಸಬ್ ಕೆ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷವಾಕ್ಯ ದೊಂದಿಗೆ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿ ಈ ಬಾರಿ ಕಾಮ್ ಕರೇ ಜೋ, ಉಮೀದ್ ಉಸೀ ಸೆ ಹೋ’ (ಯಾರು ಕೆಲಸ ಮಾಡುತ್ತಾರೋ, ಅವರ ಮೇಲೆ ಜನರ ನಿರೀಕ್ಷೆ) ಎಂಬ ಘೋಷವಾಖ್ಯದೊಂದಿಗೆ ಚುನಾವಣೆ ಎದುರಿಸಲು ನಿರ್ಧರಿಸಿದ್ದು, ಪಕ್ಷದ ರಾಷ್ತ್ರಾಧ್ಯಕ್ಷ ಅಮಿತ್ ಶಾ ನೂತನ ಘೋಷವಾಖ್ಯ ಬಿಡುಗಡೆಗೊಳಿಸಿದ್ದಾರೆ.

ಈ ಘೋಷವಾಖ್ಯದಡಿ ಅಭಿಯಾನವನ್ನು ಆರಂಭಿಸಿರುವ ಬಿಜೆಪಿ ಲೋಕಸಭಾ ಚುನಾವಣೆಗಾಗಿ ಈ ಅಭಿಯಾನದ ಮೂಲಕ ದೇಶಾದ್ಯಂತ ಸುಮಾರು 10 ಕೋಟಿ ಜನರಿಂದ ಪ್ರಣಾಳಿಕೆ ರೂಪಿಸಲು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಿದೆ. ಈ ಸಲಹೆ ಸೂಚನೆಗಳನ್ನು ಆಧರಿಸಿ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ್ ಪತ್ರ’ ತಯಾರಿಸಲಿದೆ.

ಈ ಅಭಿಯಾನದ ಅಂಗವಾಗಿ ದೇಶಾದ್ಯಂತ ಇರುವ 4000 ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಲು 300 ವಿಶೇಷ ವಾಹನಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ವಾಹನಗಳಲ್ಲಿ 7700 ಸಲಹೆ ಸಂಗ್ರಹ ಪೆಟ್ಟಿಗೆಗಳನ್ನು ಇರಿಸಲಾಗಿದೆ.

Kaam kare jo, umeed usi se ho: BJP announces campaign theme for 2019 Lok Sabha election

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ