ನವದೆಹಲಿ: ಸದಾ ಒಂದಿಲ್ಲೊಖ್ಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಗಮನಸೆಳೆಯುತ್ತಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೈಪೋಲಾರ್ ಡಿಸಾರ್ಡರ್ (ಮಾನಸಿಕ ಕಾಯಿಲೆ)ಯಿಂದ ಬಳಲುತ್ತಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಿರುವ ಪ್ರಿಯಾಂಕಾ ಗಾಂಧಿ ಕುರಿತು ಮಾತನಾಡಿರುವ ಸ್ವಾಮಿ, ಪ್ರಿಯಾಂಕಾ ದ್ವಿಧ್ರುವೀಯ ಎಂಬ ಖಿನ್ನತೆಯ ರೋಗದಿಂದ ಬಳಲುತ್ತಿದ್ದಾರೆ. ಇಂದರಿಂದಾಗಿ ಅವರು ಜನರನ್ನು ಹೊಡೆಯುತ್ತಾರೆ. ಈ ರೋಗದಿಂದಾಗಿ ಅವರು ಸಾಮಾನ್ಯ ಜೀವನ ನಡೆಸಲು ಆಗುತ್ತಿಲ್ಲ. ಆಕೆ ತನ್ನ ಮನಸ್ಥಿತಿಯ ಸಮತೋಲನ ಕಳೆದುಕೊಂಡಿದ್ದಾರೆ ಎಂಬುದನ್ನು ಸಾರ್ವಜನಿಕರು ತಿಳಿದಿರಬೇಕು ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಜ.23ರಂದು ಉತ್ತರಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
Priyanka Gandhi suffers from bipolar disorder and beats up people, alleges Subramanian Swamy