ತಮಿಳುನಾಡಿಗೆ ಪ್ರಧಾನಿ ಆಗಮನ ಹಿನ್ನಲೆ: ಟ್ವಿಟರ್ ಜೋರಾಯ್ತು ಗೋ ಬ್ಯಾಕ್​ ಮೋದಿ ಅಭಿಯಾನದ ಆಕ್ರೋಶ

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ‘ಗೋ ಬ್ಯಾಕ್​ ಮೋದಿ’ ಅಭಿಯಾನ ಜೋರಾಗಿದೆ.

ತಮಿಳುನಾಡಿನ ಮದುರೈಗೆ ಇಂದು ಭೇಟಿ ನೀಡಲಿರುವ ಪ್ರಧಾನಿ ಮೋದಿ, ಏಮ್ಸ್​ ಆಸ್ಪತ್ರೆಗೆ ಅಡಿಗಲ್ಲು ಹಾಕಲಿದ್ದಾರೆ. ಆದರೆ, ತಮಿಳುನಾಡಿಗೆ ಆಗಮಿಸುವ ಮೋದಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ‘ಗೋ ಬ್ಯಾಕ್​ ಮೋದಿ’ ಎಂಬ ಹ್ಯಾಶ್​​​ಟ್ಯಾಗ್​ ಮೂಲಕ ಟ್ವಿಟರ್​ ಅಭಿಯಾನ ಆರಂಭವಾಗಿದೆ.

ಗಜ ಚಂಡಮಾರುತದಿಂದ 3 ಲಕ್ಷ ಮಂದಿ ನಿರಾಶ್ರಿತರಾಗಿ, 11 ಲಕ್ಷ ಮರಗಳು ಧರೆಗುರುಳಿ, ಹಲವು ಜಿಲ್ಲೆಗಳ ಆಸ್ತಿ-ಪಾಸ್ತಿಗಳು ನಾಶವಾಯಿತು. ಗಜದಿಂದಾಗಿ ರಾಜ್ಯದ ಬೃಹತ್ ಜನಸಂಖ್ಯೆಯ ಜೀವನ ದುರ್ಬಲಗೊಂಡರು ಅದನ್ನು ಸರಿಪಡಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಜನರು ಕೇಂದ್ರ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್​ ಅಭಿಯಾನ ಆರಂಭಿಸಿದ್ದು, ಇದು ರಾಜ್ಯಾದ್ಯಂತ ಟ್ರೆಂಡಿಂಗ್​ ಆಗಿದೆ.

ತಮಿಳುನಾಡಿನ ಹಲವು ಜನರು ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ ಟ್ವಿಟರ್​ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಮತ್ತೊಂದೆಡೆ ಪ್ರಧಾನಿ ಆಗಮನವನ್ನು ಕೆಲವರು ಸ್ವಾಗತಿಸಿದ್ದಾರೆ.

As PM Modi Visits Tamil Nadu, Hashtag War On Twitter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ