ಮೈಸೂರು, ಮಾ.13- ಮನೆ ಬಾಗಿಲು ಮುರಿದು ಕಳ್ಳರು ಚಿನ್ನಾಭರಣ ದೋಚಿರುವ ಘಟನೆ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟೈಲರ್ ವೃತ್ತಿ ನಡೆಸುತ್ತಿರುವ ಹೇಮಲತಾ ಎಂಬುವವರ ಮನೆಗೆ ನುಗ್ಗಿದ ಕಳ್ಳರು 150 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದಟ್ಟಗಳ್ಳಿ ಬಡಾವಣೆಯ ಶಕ್ತಿ ಗಣಪತಿ ದೇವಾಲಯದ ಬಳಿ ಇರುವ ಇವರ ನಿವಾಸದ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.