ನವದೆಹಲಿ, ಜ.20- ಬೆಂಗಳೂರಿನ ಯಲಹಂಕದಲ್ಲಿ ಫೆ.20ರಿಂದ 24ರ ವರೆಗೆ ನಡೆಯಲಿರುವ ಪ್ರತಿಷ್ಠಿತಏರೋಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಜೆಕ್ ಗಣರಾಜ್ಯದ ರಕ್ಷಣಾ ಸಚಿವ ಲುಬೋಮಿರ್ ಮೆಟ್ನರ್ ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರಿಗೆಜೆಕ್ರಿಪಬ್ಲಿಕ್ ಪ್ರಧಾನಮಂತ್ರಿಅಂಡ್ರೆಜ್ ಬಬ್ಬೀಸ್ ಈ ವಿಷಯ ತಿಳಿಸಿದರು. ಭಾರತದೊಂದಿಗೆರಕ್ಷಣಾ ಮತ್ತುಇತರ ವಲಯಗಳಲ್ಲಿ ಸಹಭಾಗಿತ್ವಕ್ಕೆ ತಮ್ಮದೇಶ ಸಜ್ಜಾಗಿದ್ದು, ಉಭಯ ರಾಷ್ಟ್ರಗಳ ಬಲವರ್ಧನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಗಾಂಧಿನಗರದಲ್ಲಿ ನಡೆದ ವೈಬ್ರೆಂಟ್ಗುಜರಾತ್ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಪ್ರಧಾನಿಯವರೊಂದಿಗೆಎರಡೂ ದೇಶಗಳ ಸಂಬಂಧ ವೃದ್ಧಿ ಕುರಿತುಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ನಡೆಯುವಏರೋಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನಮ್ಮದೇಶದರಕ್ಷಣಾ ಸಚಿವರ ನಿಯೋಗ ಭೇಟಿ ನೀಡಲಿದೆ. ಇದರೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಹೊಸ ಸಹಭಾಗಿತ್ವಕ್ಕೆ ನಾಂದಿಯಾಗಲಿದೆ ಎಂದು ಬಬ್ಬೀಸ್ ತಿಳಿಸಿದರು.
ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆತಲುಪುತ್ತಿದ್ದು, ಹಲವಾರು ವಿದೇಶಿ ರಕ್ಷಣಾಕ್ಷೇತ್ರದ ಕಂಪೆನಿಗಳು ತಮ್ಮಆಧುನಿಕ ಉತ್ಪನ್ನಗಳನ್ನು ಬೆಂಗಳೂರಿಗೆ ತಂದಿವೆ ಮತ್ತುಅವನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವ ಕಾರ್ಯವುಕೂಡ ನಡೆಯುತ್ತಿದೆ.ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಸಮರ ಮತ್ತುಯುದ್ಧ ವಿಮಾನಗಳ ತಾಲೀಮುಕೂಡ ಆರಂಭಗೊಳ್ಳಲಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ.
ಕಳೆದ ಬಾರಿಗಿಂತ ಈ ಬಾರಿ ಪ್ರದರ್ಶನಕ್ಷೇತ್ರ ವಿಸ್ತರಣೆಗೊಂಡಿದ್ದು, ವ್ಯಾಪಾರ-ವಹಿವಾಟಿಗೂಕೂಡಇದು ಸಾಕ್ಷಿಯಾಗಲಿದೆ.