ಆರು ವಿಕೆಟ್ ಪಡೆದು ಮಿಂಚಿದ ಗೂಗ್ಲಿ ಬೌಲರ್ ಚಹಲ್

ಮೆಲ್ಬೋರ್ನ್: ಟೀಂ ಇಂಡಿಯಾದ ಗೂಗ್ಲಿ ಬೌಲರ್ ಯಜುವೇಂದ್ರ ಚಹಲ್ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಪಡೆದು ಮಿಂಚಿದ್ದಾರೆ.

ಮೆಲ್ಬೋರ್ನ್‍ನಲ್ಲಿ ನಡೆದ ಮೂರನೆ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಚಹಲ್ ಅದ್ಭುತ ಬೌಲಿಂಗ್ ಮಾಡಿ ಗಮನಸೆಳೆದರು.

24ನೇ ಓವರ್‍ನಲ್ಲಿ ಕಣಕ್ಕಿಳಿದ ಯುಜುವೇಂದ್ರ ಚಹಲ್ ಮೊದಲ ಓವರ್‍ನಲ್ಲೆ ಎರಡು ವಿಕೆಟ್ ಪಡೆದರು. ಅರ್ಧಶತಕದತ್ತ ಮುನ್ನಗುತ್ತಿದ್ದ ಶಾನ್ ಮಾರ್ಷ ಮತ್ತು ಉಸ್ಮಾನ್ ಖ್ವಾಜಾಗೆ ಪೆವಲಿಯನ್ ದಾರಿ ತೋರಿಸಿದ್ರು.

ಇದಾದ ನಂತರ 30ನೇ ಓವರ್‍ನಲ್ಲಿ ದಾಳಿಗಿಳಿದ ಚಹಲ್ ಆಲ್‍ರೌಂಡರ್ ಸ್ಟೋಯ್ನಿಸ್ ಬಾರಿಸಿದ ಚೆಂಡನ್ನ ಸ್ಲಿಪ್‍ನಲ್ಲಿದ್ದ ರೊಹಿತ್‍ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು.

ನಂತರ ಡೆತ್ ಓವರ್‍ಗಳಲ್ಲೂ ಕಮಾಲ್ ಮಾಡಿದ ಲೆಗ್ ಸ್ಪಿನ್ನರ್ ಚಹಲ್ ರಿಚರಡ್ರ್ಸ್‍ನ್, ಆಲ್‍ರೌಂಡರ್ ಹ್ಯಾನ್ಸ್‍ಕಾಂಬ್ ಮತ್ತು ಆಡಮ್ ಜಾಂಪಾ ಅವರ ವಿಕೆಟ್ ಪಡೆಯುವುದರೊಂದಿಗೆ ಒಟ್ಟು 6 ವಿಕೆಟ್ ಪಡೆದ ಸಾಧನೆ ಮಾಡಿದರು.

ಅಗರ್‍ಕರ್ ದಾಖಲೆ ಸರಿಗಟ್ಟಿದ ಚಹಲ್
6 ವಿಕೆಟ್ ಪಡೆಯುವುದರೊಂದಿಗೆ ಚಹಲ್ ಮೆಲ್ಬೋರ್ನ್ ಅಂಗಳದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಗೌರವಕ್ಕೆ ಪಾತ್ರರಾದ್ರು. ಈ ಹಿಂದೆ ತಂಡದ ಮಾಜಿ ವೇಗಿ ಅಜಿತ್ ಅಗರ್‍ಕರ್ ಇದೇ ಅಂಗಳದಲ್ಲಿ 42 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಜೊತೆಗೆ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ತಂಡದ ಏಳನೇ ಬೌಲರ್ ಎನಿಸಿದರು. ಐದು ವಿಕೆಟ್ ಗಳ ಗೊಂಚಲನ್ನ ಪಡೆದ ಸಾಧನೆಯನ್ನ ಚಹಲ್ ಮಾಡಿದ್ದಾರೆ. ಕಳೆದ ವರ್ಷ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಮಿಂಚಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ