ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ಮತ್ತೆ ಕಮಾಲ್ ಮಾಡಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ದಾರೆ. ಇದರೊಂದಿಗೆ ತಮ್ಮನ್ನ ಟೀಕಿಸುತ್ತಿದ್ದವರಿಗೆ ಮಾಹಿ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ಭಾರೀ ಟೀಕೆಗಳಿಗೆ ಗುರಿಯಾಗಿದ್ದ ರಾಂಚಿ ರಾಂಬೊ.
ಅಡಿಲೇಡ್ ಪಂದ್ಯಕ್ಕೂ ಮುನ್ನ ರಾಂಚಿ ಱಂಬೊ ಧೋನಿ ಭಾರೀ ಟೀಕೆಗಳಿಗೆ ಗುರಿಯಾಗಿದ್ರು. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಧೋನಿ 51 ರನ್ ಗಳಿಸಿದ್ರು. 51 ರನ್ಗಳಿಸಲು ಧೋನಿ 96 ಎಸೆತಗಳನ್ನ ನಿಧಾನಗತಿಯಲ್ಲಿ ಆಡಿದ್ದು ಭಾರೀ ಟೀಕೆಗಳಿಗೆ ಗುರಿಯಾಗಿದ್ರು. ಆ ಪಂದ್ಯದಲ್ಲಿ ಧೋನಿ ನಿಧಾಗತಿಯ ಆಟಕ್ಕೆ ಮೊರೆ ಹೋಗಿ ಒಂದೊಂದೆ ರನ್ ಕಲೆ ಹಾಕಿ ರೋಹಿತ್ಗೆ ಸ್ಟ್ರೈಕ್ ಬಿಟ್ಟುಕೊಡ್ತಿದ್ರು. ಮಾಹಿ ನಿಧಾನಗತಿಯಲ್ಲಿ ಆಡಿದ ಕಾರಣ ಕೊನೆಯಲ್ಲಿ ತಂಡದ ಬ್ಯಾಟ್ಸಮನ್ಗಳು ಒತ್ತಡದಲ್ಲಿ ಸಿಲುಕಿ 34 ರನ್ಗಳ ಸೋಲನ್ನ ಅನುಭವಿಸಬೇಕಾಯಿತು.
ಆ ಪಂದ್ಯದಲ್ಲಿ 51 ರನ್ ಗಳಿಸಿದ್ದಾಗ ಧೋನಿ ಅಂಪೈರ್ ಅವರ ಕೆಟ್ಟ ತೀರ್ಪಿಗೆ ಬಲಿಯಾಗಿದ್ರು. ಔಟ್ ಅಲ್ಲದಿದ್ದರೂ ಮಾಹಿ ತಂಡವನ್ನ ಗೆಲ್ಲಿಸಲಾಗದೇ ಪೆವಿಲಿಯನ್ ದಾರಿ ಹಿಡಿಯಬೇಕಾಯಿತು. ಈ ಸೋಲಿಗೆ ಧೋನಿಯೇ ನೇರ ಕಾರಣ ಅಂತ ಕೆಲವರು ಟೀಕಿಸಿದ್ರು.
ಅಡಿಲೇಡ್ನಲ್ಲಿ ಗೇಮ್ ಫಿನ್ನಿಶರ್ರಾಗಿ ಹೊರ ಹೊಮ್ಮಿದ ಮಾಹಿ
ಕಾಂಗರುಗಳ ವಿರುದ್ಧ ಅಡಿಲೇಡ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಹಿ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ರು. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಐದನೇ ಕ್ರಮಾಂಕದಲ್ಲಿ ಬಂದ ಧೋನಿ ಕ್ಯಾಪ್ಟನ್ ಕೊಹ್ಲಿ ಜೊತೆ 82 ರನ್ಗಳ ಅಡಿuಛಿiಚಿಟ ಇನ್ನಿಂಗ್ಸ್ ಕಟ್ಟಿಕೊಟ್ರು.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿತು. ಈ ಸಂದರ್ಭದಲ್ಲಿ ತಂಡದ ಜವಾಬ್ದಾರಿ ಹೊತ್ತ ಧೋನಿ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಜೊತೆಗೂಡಿ ಮುರಿಯದ ಐದನೇ ವಿಕೆಟ್ಗೆ 57 ರನ್ ಗಳನ್ನ ಸೇರಿಸಿ ಕಾಂಗರೂಗಳ ಗೆಲುವನ್ನ ಕಿತ್ತುಕೊಂಡಿದ್ರು. ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಧೋನಿ ಕೊನೆಯ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ರು.
ಅರ್ಧ ಶತಕ ಬಾರಿಸಿದ ಧೋನಿ
ಎಸೆತ – 54
ರನ್ – 55*
ಸಿಕ್ಸರ್ 2
ಸ್ಟ್ರೈಕ್ ರೇಟ್ – 101.85
ಎರಡನೇ ಏಕದಿನ ಪಂದ್ಯದಲ್ಲಿ ಧೋನಿ 54 ಎಸೆತಗಳನ್ನ ಎದುರಿಸಿ ಅಜೇಯ 55 ರನ್ ಗಳಿಸಿದ್ರು. 2 ಸಿಕ್ಸರ್ನೊಂದಿಗೆ 101.85 ಸ್ಟ್ರೈಕ್ ರೇಟ್ ಪಡೆದ್ರು.
ಸತತ ಎರಡನೇ ಅರ್ಧ ಶತಕ ಬಾರಿಸಿದ ಧೋನಿ.
ಅಡಿಲೇಡ್ ಅಂಗಳದಲ್ಲಿ ಧೋನಿ ಅಜೇಯ 55 ರನ್ ಗಳಿಸುವ ಮೂಲಕ ರಾಂಚಿ ಱಂಬೊ ಧೋನಿ ಸರಣಿಯಲ್ಲಿ ಸತತ ಎರಡನೇ ಶತಕ ಬಾರಿಸಿದ್ರು. ಇದರೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 69ನೇ ಅರ್ಧ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಒಟ್ಟಾರೆ ಧೋನಿ ಅಡಿಲೇಡ್ ಅಂಗಳದಲ್ಲಿ ತಂಡವನ್ನ ಗೆಲುವಿನ ದಡ ಸೇರಿಸುವ ಮೂಲಕ ತಾನು ಈಗಲೂ ಗೇಮ್ ಫಿನಿಶರ್ ಅಂತ ಪ್ರೂವ್ ಮಾಡಿದ್ದಾರೆ. ತಮ್ಮ ನ್ನ ಟೀಕಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.