ಅಡಿಲೇಡ್ನಲ್ಲಿ ವಿರಾಟ್ ಕೊಹ್ಲಿಯೇ ಅಧಿಪತಿ

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಿನ್ನೆ ಅಡಿಲೇಡ್ ಅಂಗಳದಲ್ಲಿ ಅಧಿಪತಿಯಾಗಿ ಮೆರೆದಾಡಿದ್ರು. ಅಡಿಲೇಡ್ ಅಂಗಳದಲ್ಲಿ ಚೆನ್ನಾಗಿ ಆಡುವ ಕೊಹ್ಲಿ ನಿನ್ನೆ ನಿರೀಕ್ಷೆಯಂತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು.

ಅಡಿಲೇಡ್ ಅಂಗಳ ಕ್ಯಾಪ್ಟನ್ ಕೊಹ್ಲಿಗೆ ಎರಡನೇ ತವರು ಮನೆ ಇದ್ದಂತೆ. ವಿದೇಶದಲ್ಲಿ ಕೊಹ್ಲಿ ಚೆನ್ನಾಗಿ ಆಡುವ ಪಿಚ್ ಯಾವುದಾದದ್ರು ಇದ್ರೆ ಅದು ಅಡಿಲೇಡ್ ಅಂಗಳ ಮಾತ್ರ. ಈ ಅಂಗಳದಲ್ಲಿ ವಿರಾಟ್ ಕೊಹ್ಲಿ ನೆಲ ಕಚ್ಚಿ ನಿಂತರೆ ಮುಗೀತು ರಾಶಿ ರಾಶಿ ರನ್ ಗುಡ್ಡೆ ಹಾಕ್ತಾರೆ.

ಇದಕ್ಕೆ ಈ ಹಿಂದಿನ ಪಂದ್ಯಗಳೇ ಸಾಕ್ಷಿ .ಈ ಹಿಂದ ಎಇದೇ ಅಂಗಳದಲ್ಲಿ ಮೂರು ಪಂದ್ಯಗಳನ್ನ ಆಡಿದ್ದ ಕ್ಯಾಪ್ಟನ್ ಕೊಹ್ಲಿ 1 ಶತಕ ಬಾರಿಸಿ 140 ರನ್ ಗಳಿಸಿದ್ದರು. ಹೀಗಾಗಿ ನಿನ್ನೆ ಅಡಿಲೇಡ್ ಪಂದ್ಯಕ್ಕೂ ಮುನ್ನ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ ಇತ್ತು. ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಸಾಕಷ್ಟು ಬೆವರಿಳಿಸಿದ್ರು.

ಅಡಿಲೇಡ್ನಲ್ಲಿ ಅಧಿಪತಿಯಾದ ವಿರಾಟ್ ಕೊಹ್ಲಿ
ನಿನ್ನೆ ಪಂದ್ಯದಲ್ಲಿ ಒಂದನೇ ಕ್ರಮಾಂಕದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ರನ್ ಮಳೆಯನ್ನೆ ಹರಿಸಿದ್ರು. ಲೀಲಾಜಾಲವಾಗಿ ಬ್ಯಾಟ್ ಬೀಡಿದ ವಿರಾಟ್ ಕೊಹ್ಲಿ ಆರಂಭದಲ್ಲೆ ರೋಹಿತ್ ಜೊತೆಗೂಡಿ ಆಸಿಸ್ ಬೌಲರ್ಗಳ ಬೆವರಿಳಿಸಿದ್ರು.

ರೋಹಿತ್, ಅಂಬಾಟಿ ಜೊತೆ ಅರ್ಧ ಶತಕದ ಜೊತೆಯಾಟ
ಆರಂಭಿಕ ಆಘಾತ ಅನುಭವಿಸಿದ್ದಾಗ ರೋಹಿತ್ ಜೊತೆಗೂಡಿದ್ದ ವಿರಾಟ್ ಕೊಹ್ಲಿ ಆಸಿಸ್ ಬೌಲರ್ಗಳ ಬೆವರಿಳಿಸಿದ್ರು. ರೋಹಿತ್ ಸಾಥ್ ಪಡೆದ ಕೊಹ್ಲಿ ರೋಹಿತ್ ಜೊತೆ 54 ರನ್ಗಳ ಜೊತೆಯಾಟ ಆಡಿದ್ರು.

ರೋಹಿತ್ ಔಟ್ ಆದ ನಂತರ ಅಂಬಾಟಿ ಜೊತೆ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ಕೊಹ್ಲಿ 59 ರನ್ಗಳ ಜೊತೆಯಾಟ ಆಡಿ ತಂಡದ ಗೆಲುವಿನ ಭರವಸೆ ಮೂಡಿಸಿದ್ರು. ವಿರಾಟ್ ಕೊಹ್ಲಿ 45 ಎಸತೆದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ರು.

ಮಾಹಿ ಜೊತೆ ಕೊಹ್ಲಿ ಬೊಂಬಾಟ್ ಬ್ಯಾಟಿಂಗ್
160 ರನ್ಗಳಿದ್ದಾಗ ಟೀಂ ಇಂಡಿಯಾ ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿತು. ಧೋನಿ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತೆ ರನ್ ಮಳೆ ಸುರಿಸಿದ್ರು. ಧೊನಿ ಜೊತೆ ಕೊಹ್ಲಿ ಒಟ್ಟು 82 ರನ್ ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ರು.

39ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಆಸಿಸ್ ಬೌಲರ್ಗಳನ್ನ ಚೆಂಡಾಡಿದ ವಿರಾಟ್ ಕೊಹ್ಲಿ ಆಕರ್ಷಕ ಬಾರಿಸಿ ಮಿಂಚಿದ್ರು. ಕೇವಲ 108 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದ್ರು.ಇದರೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 39ನೇ ಏಕದಿನ ಶತಕ ಬಾರಿಸಿದ ಸಾಧನೆ ಮಾಡಿದ್ರು.

ಅಡಿಲೇಡ್ನಲ್ಲಿ ಕೊಹ್ಲಿ ಅಧಿಪತಿ
ಎಸೆತ –  112
ರನ್ –  104
4/6 –  5/2
ಸ್ಟ್ರೈಕ್ ರೇಟ್ 92.85

ಅಡಿಲೇಡ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಒಟ್ಟು 112 ಎಸೆತಗಳನ್ನ ಎದುರಿಸಿ 104 ರನ್ ಕಲೆ ಹಾಕಿದ್ರು. ಐದು ಬೌಂಡರಿ ಎರಡು ಸಿಕ್ಸರ್ ಬಾರಿಸಿ 92.85 ಸ್ಟ್ರೈಕ್ ರೇಟ್ ಹೊಂದಿದ್ರು.

ಚೇಸಿಂಗ್ನಲ್ಲಿ ನಾಯಕನಾಗಿ 24ನೇ ಶತಕ ಬಾರಿಸಿದ ಚೇಸಿಂಗ್ ಮಾಸ್ಟರ್
ಶತಕ ಬಾರಿಸುವ ಮೂಲಕ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡ್ರು. 104 ರನ್ಗಳಿಸು ಮೂಲಕ ಆಸಿಸ್ ವಿರುದ್ಧ ಆರನೇ ಶತಕ ಬಾರಿಸಿದ ಸಾಧನೆ ಮಾಡಿದ್ರು. ಚೇಸಿಂಗ್ನಲ್ಲಿ ನಾಯಕನಾಗಿ 24ನೇ ಶತಕ ಬಾರಿಸಿದ ಸಾಧನೆ ಮಾಡಿದ್ರು.

ಒಟ್ಟಾರೆ ಅಡಿಲೇಡ್ ಅಂಗಳ ವಿರಾಟ್ ಕೊಹ್ಲಿಗೆ ಎರಡನೇ ತವರಿನ ಪಿಚ್ ಅನ್ನೋದು ಮತ್ತೋಮ್ಮೆ ಪ್ರೂವ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ