ಬೆಂಗಳೂರು, ಮಾ.12- ಭ್ರಷ್ಟರ ಮುಕ್ತ, ಭ್ರಷ್ಟಾಚಾರ ಮುಕ್ತ ಮತ್ತು ಕಾಂಗ್ರೆಸ್ ಮುಕ್ತ ಆಡಳಿತ ನೀಡುವುದು ನಮ್ಮ ಗುರಿ ಎಂದು ರಾಜ್ಯಸಭೆಯ ಬಿಜೆಪಿ ಅಭ್ಯರ್ಥಿ ರಾಜೀವ್ಚಂದ್ರಶೇಖರ್ ಹೇಳಿದರು.
ನಾಮಪತ್ರ ಸಲ್ಲಿಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಪಕ್ಷೇತರ ಸದಸ್ಯನಾಗಿ ರಾಜ್ಯಸಭೆಯಲ್ಲಿ 12 ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಬಿಜೆಪಿ ಸೇರಿರುವುದು ನನಗೆ ಗೌರವದ ವಿಷಯ. ನನ್ನನ್ನು ಬೆಂಬಲಿಸಿದ ಬಿಜೆಪಿಯ ಎಲ್ಲಾ ನಾಯಕರಿಗೂ, ಅವಕಾಶ ಮಾಡಿಕೊಟ್ಟ ಪ್ರಧಾನಿನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತಿತರರಿಗೆ ಧನ್ಯವಾದಗಳು ಎಂದು ಹೇಳಿದರು.