ಬೆಂಗಳೂರು, ಜ.7-ದೃಶ್ಯ ಮಾಧ್ಯಮಗಳು ಸುದ್ದಿಯ ಆದ್ಯತೆಯ ಆಯ್ಕೆಯಲ್ಲಿ ಹೆಚ್ಚು ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಸಲಹೆ ಮಾಡಿದ್ದಾರೆ.
ಕರ್ನಾಟಕ ಚರ್ಚಾವೇದಿಕೆ ಹಾಗೂ ಬಸವನಗುಡಿ ನ್ಯಾಷನಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಕು. ಎಚ್.ಎಂ.ವನಿತಾ ಸ್ಮಾರಕ 17ನೇ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಚಂದನವನದ ಕೆಲವು ನಟ, ನಿರ್ಮಾಪಕರ ಮನೆಗಳ ಮೇಲೆ ನಡೆದ ಐಟಿ ದಾಳಿಯ ಸುದ್ದಿಯ ಅಬ್ಬರದಲ್ಲಿ, 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸುದ್ದಿಗಳು ಗೌಣವಾಗಿ ಹೋದವು ಎಂದು ವಿಷಾದಿಸಿದರು.
ಇಂದು ಮಾಧ್ಯಮಗಳು ವೀಕ್ಷಕರ ಬದಲಾಗಿ, ಗ್ರಾಹಕರನ್ನು ಹುಡುಕುತ್ತಿವೆ ಎಂದು ವಿಷಾದಿಸಿದ ಅವರು, ವಿವಿಧ ಕ್ಷೇತ್ರಗಳ, ಸಾಮಾಜಿಕ ಕಳಕಳಿಯ ಸುದ್ದಿಗಳಿಗೆ ಆದ್ಯತೆ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ, ವಾಕ್ಪಟುತ್ವ ಮತ್ತು ವೈಚಾರಿಕೆತೆಯನ್ನು ಮೂಡಿಸುತ್ತವೆ, ಮತ್ತೊಬ್ಬರ ಅಭಿಪ್ರಾಯಕ್ಕೆ ಗೌರವ ನೀಡುವುದನ್ನು ಕಲಿಸುತ್ತದೆ ಎಂದ ಅವರು, ಹಿರಿಯ ವಕೀಲರಾದ ಮಲ್ಲೇಶಯ್ಯನವರು ಅಕಾಲಿಕ ಮರಣಕ್ಕೆ ತುತ್ತಾದ ತಮ್ಮ ಪ್ರತಿಭಾವಂತ ಪುತ್ರಿ ವನಿತಾ ಹೆಸರಿನಲ್ಲಿ ರಾಜ್ಯಮಟ್ಟದ ಕನ್ನಡ ಚರ್ಚಾಸ್ಪರ್ಧೆ ಆಯೋಜಿಸಿ, ಸ್ಪರ್ಧಿಗಳಲ್ಲೇ ತಮ್ಮ ಪುತ್ರಿಯನ್ನು ಕಾಣುತ್ತಿದ್ದಾರೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಮೀಸಲು ಪೆÇಲೀಸ್ ಪಡೆಯ ಎಡಿಜಿಪಿ ಭಾಸ್ಕರ್ರಾವ್, ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ.ತರ್ಕಶೀಲತೆಗೆ ಮನಸ್ಸನ್ನು ಅಣಿಗೊಳಿಸುತ್ತದೆ.ಸೋಲುತ್ತೇವೆ ಎಂಬ ಮನೋಭಾವವನ್ನು ವಿದ್ಯಾರ್ಥಿಗಳು ಬಿಟ್ಟು, ಗೆಲ್ಲುತ್ತೇವೆ ಎಂಬ ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳಲು ಇಂಥ ಸ್ಪರ್ಧೆ ಸಹಕಾರಿ ಎಂದರು.
ನ್ಯಾಷನಲï ಎಜ್ಯುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎ.ಎಚ್. ರಾಮರಾವ್, ಕನ್ನಡ ಚರ್ಚಾಸ್ಪರ್ಧೆಗಳಲ್ಲಿ ವನಿತಾ ಸ್ಮಾರಕ ಚರ್ಚಾಸ್ಪರ್ಧೆಗೆ ಉನ್ನತ ಸ್ಥಾನವಿದೆ, ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಮುಂದಿನ ವರ್ಷದಿಂದ ಪದವಿಪೂರ್ವ ಮತ್ತು ಪದವಿ ವಿಭಾಗಗಳೆರಡರಕ್ಕೂ ಕಾಲೇಜಿನ ವತಿಯಿಂದ ಪರ್ಯಾಯ ಕರಂಡಕ ನೀಡುವುದಾಗಿ ಪ್ರಕಟಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಮಲ್ಲೇಶಯ್ಯ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ, ಇವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದರು.
ಪದವಿ ಪೂರ್ವ ವಿಭಾಗದಲ್ಲಿ ಸಾಮಾಜಿಕ ಜಾಲ ತಾಣಗಳು ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡುತ್ತಿವೆ; ಮತ್ತು ಪದವಿ ವಿಭಾಗ ಪ್ರಸಕ್ತ ಸನ್ನಿವೇಶದಲ್ಲಿ ಭಾರತಕ್ಕೆ ಅಧ್ಯಕ್ಷೀಯ ಮಾದರಿ ಚುನಾವಣೆಯೇ ಸೂಕ್ತ ಎಂಬ ವಿಷಯದ ಮೇಲೆ ನಡೆದ ಚರ್ಚಾಸ್ಪರ್ಧೆಯಲ್ಲಿ ಪದವಿ ವಿಭಾಗದ ಪರ್ಯಾಯ ಪಾರಿತೋಷಕ ಮಂಡ್ಯದ ಪಿಇಎಸ್ ಕಾಲೇಜು, ಪದವಿಪೂರ್ವ ವಿಭಾಗದ ಪರ್ಯಾಯ ಪಾರಿತೋಷಕ ಬಸವನಗುಡಿ ನ್ಯಾಷನಲï ಕಾಲೇಜು ವಿದ್ಯಾರ್ಥಿಗಳ ಪಾಲಾಯಿತು.
ಕುಲ ಸಚಿವ ಪೆÇ್ರ ಎಚ್.ಕೆ.ಮೌಳೇಶ್, ಪ್ರಾಚಾರ್ಯರಾದ ಪೆÇ್ರ. ವಿ. ನಾರಾಯಣಸ್ವಾಮಿ, ಉದ್ಯಮಿ ಟಿ.ಎಸ್. ಕೃಷ್ಣಮೂರ್ತಿ, ಪತ್ರಕರ್ತ ಟಿ.ಎಂ.ಸತೀಶ್ ಮೊದಲಾದವರು ಹಾಜರಿದ್ದರು.