ನವದೆಹಲಿ, ಜ.7- ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ಗೋವಾ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಮಂಡಳಿಯು ತನ್ನ ತೀರ್ಪಿನಲ್ಲಿ 3.90 ಟಿಎಂಸಿ ನೀರನ್ನು ಕುಡಿಯುವುದಕ್ಕೆ ಕೃಷಿ ಚಟುವಟಿಕೆಗಳಿಗೆ 1.5 ಟಿಎಂಸಿ ಹಾಗೂ ಜಲ ವಿದ್ಯುತ್ ಯೋಜನೆಗೆ 8.20 ಟಿಎಂಸಿ ನೀರನ್ನು ಬಳಸಿಕೊಳ್ಳುವಂತೆ ತಿಳಿಸಿತ್ತು.
ಈ ಆದೇಶ ನ್ಯಾಯ ಸಮ್ಮತವಾಗಿಲ್ಲ. ನೀರಿನ ಸಮರ್ಪಕ ಹಂಚಿಕೆಯಾಗಿಲ್ಲ. ಈ ಅನ್ಯಾಯ ಸರಿಪಡಿಸಬೇಕು ಎಂದು ಕರ್ನಾಟಕ ಸರ್ಕಾರ ನ್ಯಾಯ ಮಂಡಳಿಗೆ ಪರಿಶೀಲನಾ ಅರ್ಜಿ ಸಲ್ಲಿಸಿತು. ಅದಕ್ಕೆ ಪ್ರತಿಯಾಗಿ ಗೋವಾ ಸರ್ಕಾರ ಕೂಡ ನೀರು ಹಂಚಿಕೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಿತು.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೋವಾ ಸರ್ಕಾರಕ್ಕೆ ನೋಟಿಸ್ ನೀಡಿದೆ.