ಸುಪ್ರೀಂಕೋರ್ಟ್ ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಂಬಾನಿಗೆ ನೋಟಿಸ್‍ ಜಾರಿಗೊಳಿಸಿದೆ

ನವದೆಹಲಿ, ಜ.7 (ಪಿಟಿಐ)- ಬಹುಕೋಟಿ ರೂ. ಹಣಕಾಸು ಬಾಕಿ ವಸೂಲಿಗಾಗಿ ಎರಿಕ್ಸ್ ಇಂಡಿಯಾ ಸಂಸ್ಥೆ ಸಲ್ಲಿಸಿದ್ದ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್(ಆರ್‍ಕಾಮ್) ಅಧ್ಯಕ್ಷ ಅನಿಲ್ ಧೀರೂಭಾಯಿ ಅಂಬಾನಿ ಮತ್ತಿತರರಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿದೆ.

ಈ ಬಗ್ಗೆ ನಾಲ್ಕು ವಾರಗಳ ಒಳಗೆ ಪ್ರತ್ಯುತ್ತರ ನೀಡುವಂತೆ ಅಂಬಾನಿ ಮತ್ತು ಇತರರಿಗೆ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಅವರನ್ನು ಒಳಗೊಂಡ ಪೀಠ ಸೂಚನೆ ನೀಡಿದೆ.

ಆರ್‍ಕಾಮ್ ಪರವಾಗಿ ಕೋರ್ಟ್‍ಗೆ ಹಾಜರಾದ ಹಿರಿಯ ವಕೀಲರಾದ ಕಪೀಲ್ ಸಿಬಲ್ ಮತ್ತು ಮುಕುಲ್ ರೋಹಟಗಿ, ಎರಿಕ್‍ನನ್‍ಗೆ ನೀಡಬೇಕಾದ ಬಾಕಿ 118 ಕೋಟಿ ರೂ.ಗಳ ಮೊತ್ತವನ್ನು ಸ್ವೀಕರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದರೆ ಎರಿಕ್‍ಸನ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲು 118 ಕೋಟಿ ರೂ.ಗಳನ್ನು ಸ್ವೀಕರಿಸಲು ನಿರಾಕರಿಸಿದರು. ಆರ್‍ಕಾಮ್‍ನಿಂದ ಎರಿಕ್‍ಸನ್‍ಗೆ ಬರಬೇಕಾದ ಬಾಕಿ ಇರುವ ಸಂಪೂರ್ಣ 550 ಕೋಟಿ ರೂ.ಗಳನ್ನು ಠೇವಣಿ ಇಡಬೇಕೆಂದು ಅವರು ಆಗ್ರಹಿಸಿದರು

ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಪೀಠವು ಕೋರ್ಟ್‍ನ ರಿಜಿಸ್ಟ್ರಿಯಲ್ಲಿ 118 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಪ್ಟ್ ನೀಡುವಂತೆ ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್‍ಗೆ ಸೂಚಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ