ಸಿಡ್ನಿ :ಇಡೀ ಕ್ರಿಕೆಟ್ ದುನಿಯಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನ ನೋಡ್ತಿದೆ. ಸಿಡ್ನಿಯಲ್ಲಿ ಇಂದಿನಿಂದ ಆಸಿಸ್ ವಿರುದ್ಧ ಆರಂಭವಾಗಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೇ ಆಸಿಸ್ ನಾಡಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ.
ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಪಡೆದಿರುವ ಕೊಹ್ಲಿ ಪಡೆ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಈ ಬಾರಿ ಗೆದ್ದು ತೀರಲೇಬೇಕೆಂದು ಕಣಕ್ಕಿಳಿಯುತ್ತಿದೆ.
ಹೊಸ ಇತಿಹಾಸ ಬರೆಯುವುದಕ್ಕೆ ಸಜ್ಜಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಹೊಂದಿದೆ. ಸಿಡ್ನಿಯಲ್ಲಿ ಆರಂಭವಾಗಿರುವ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ, ಗೆಲುವು ದಾಖಲಿಸದೆ ಡ್ರಾ ಸಾಧಿಸಿದ್ರು, ಇತಿಹಾಸ ನಿರ್ಮಾಣವಾಗಲಿದೆ. ಈ ಮೂಲಕ 76 ವರ್ಷಗಳ ಕನಸು ನನಸಾಗಿಸಿದ ಕೀರ್ತಿ ಕೊಹ್ಲಿಗೆ ಸಲ್ಲಲಿದೆ.
ಕಪಿಲ್, ಸೌರವ್, ಧೋನಿಗೂ ಸಿಕ್ಕಿರಲಿಲ್ಲ ಯಶಸ್ಸಿನ ಮಿಸ್ಟ್ರಿ
ಸಿಡ್ನಿಯಲ್ಲಿ ಆಸಿಸ್ ವಿರುದ್ಧ ಆಡುತ್ತಿರುವ ಕ್ಯಾಪ್ಟನ್ ಕೊಹ್ಲಿ ಹೊಸ ಇತಿಹಾಸ ಬರೆಯುವ ಹೊಸ್ತಿಲ್ಲಲ್ಲಿದ್ದಾರೆ. ಈ ಹಿಂದೆ ಆಸಿಸ್ ಪ್ರವಾಸ ಕೈಗೊಂಡಿದ್ದ ತಂಡದ ಮಾಜಿ ನಾಯಕರುಗಳಾದ ಕಪಿಲ್ ದೇವ್, ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ಆಸಿಸ್ ಪ್ರವಾಸ ಕೈಗೊಂಡಿದ್ರು ಇವರ್ಯಾರು ಕಾಂಗರೂ ನಾಡಲ್ಲಿ ಟೆಸ್ಟ್ ಸರಣಿ ಮಾತ್ರ ಗೆದ್ದಿರಲಿಲ್ಲ.
ಬಾರ್ಡರ್ ಗವಾಸ್ಕರ್ ಟ್ರೋಫಿ ಅಳವಡಿಸಿದ ಮೇಲೆ ಟೀಂ ಇಂಡಿಯಾ ಐದು ಬಾರಿ ಆಸಿಸ್ ಪ್ರವಾಸನ್ನ ಕೈಗೊಂಡಿದೆ. ಆದರೆ ಒಮ್ಮೆ ಕೂಡ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿರಲಿಲ್ಲ. 2003ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಲಿಷ್ಠ ಟೀಂ ಇಂಡಿಯಾ ಸಾಲಿಡ್ ಪರ್ಫಾಮನ್ಸ್ ಕೊಟ್ಟು 1-1 ಅಂತರದಿಂದ ಟೆಸ್ಟ್ ಸರಣಿಯನ್ನ ಡ್ರಾ ಮಾಡಿಕೊಂಡಿತ್ತು.
ಸೌರವ್ ಗಂಗೂಲಿ ಬಿಟ್ಟರೇ ತಂಡದ ಮಾಜಿ ನಾಯಕರುಗಳಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಟೆಸ್ಟ್ ಸರಣಿಯನ್ನ ಡ್ರಾ ಮಾಡಿಕೊಂಡಿದ್ರು.
ಇವರು ಬಿಟ್ಟರೇ ತಂಡದ ನಾಯಕರುಗಳಾಗಿದ್ದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ , ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾಸ ಆಸಿಸ್ ನಾಡಲ್ಲಿ ಟೀಂ ಇಂಡಿಯಾ ಮಣ್ಣು ಮುಕ್ಕಿತ್ತು.
ದಾದಾ ದಾಖಲೆ ಹಿಂದಿಕ್ಕಲಿದ್ದಾರೆ ಚೇಸಿಂಗ್ ಮಾಸ್ಟರ್
ಕಾಂಗರೂಗಳ ವಿರುದ್ಧ ಕ್ಯಾಪ್ಟನ್ ಕೊಹ್ಲಿ ಪಂದ್ಯ ಗೆದ್ದರೆ ಕಾಂಗರೂಗಳ ನಾಡಲ್ಲಿ ಹೊಸ ಇತಿಹಾಸ ಬರೆಯುವ ಜೊತೆಗೆ ನಾಯಕನಾಗಿ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಸೌರವ್ ಗಂಗೂಲಿ ವಿದೇಶದಲ್ಲಿ 28 ಟೆಸ್ಟ್ ಪಂದ್ಯಗಳನ್ನಾಡಿದ 11 ಪಂದ್ಯಗಳನ್ನ ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ವಿದೇಶದಲ್ಲಿ 24 ಟೆಸ್ಟ್ ಪಂದ್ಯಗಳ್ನನಾಡಿ 11 ಟೆಸ್ಟ್ ಪಂದ್ಯಗಳನ್ನ ಗೆದ್ದಿದ್ದಾರೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ ಎಲ್ಲ ರೀತಿಯಿಂದಲೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಿಡ್ನಿಯಲ್ಲೂ ವರ್ಕೌಟ್ ಆಗುತ್ತಾ ವೇಗಿಗಳ ಕೆಮೆಸ್ಟ್ರಿ ?
ಟೀಂ ಇಂಡಿಯಾ ಆಸಿಸ್ ವಿರುದ್ಧ ಐತಿಹಾಸಿಕ ಸರಣಿ ಗೆಲ್ಲುವ ಹೊಸ್ತಿಲಿಗೆ ಬಂದಿದೆ ಅಂದ್ರೆ ಇದಕ್ಕೆ ತಂಡದ ವೇಗದ ಬೌಲರ್ಗಳೇ ಕಾರಣರಾಗಿದ್ದಾರೆ. ಈ ಹಿಂದಿನ ಎರಡು ಪಂದ್ಯಗಳನ್ನ ಪೇಸರ್ಸ್ಗಳ ಸಹಾಯದಿಂದ ಗೆದ್ದಿದ್ದ ಟೀಂ ಇಂಡಿಯಾ ಸಿಡ್ನಿಯಲ್ಲೂ ಪೇಸರ್ಸ್ಗಳ ಕೆಮೆಸ್ಟ್ರ ವರ್ಕೌಟ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.