ಬೆಂಗಳೂರು,ಜ.2-ಇಂದು ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಿರುವುದು ಖುಷಿಯ ವಿಚಾರ ಎಂದು ಚಿಂತಕಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ನಾವು 21ನೇ ಶತಮಾನದಲ್ಲಿ ಇದ್ದೇವೆ. ಮಹಿಳೆಯರು ಪುರುಷರಿಗೆ ಸಮನಾಗಿ ಬೆಳೆದಿದ್ದಾರೆ.ಎಲ್ಲಾ ರಂಗದಲ್ಲೂ ಮಹಿಳೆಯರು ಮುಂದೆ ಬಂದಿದ್ದಾರೆ ಹೀಗಿರುವಾಗ ದೇಗುಲ ಪ್ರವೇಶ ವಿಚಾರದಲ್ಲಿ ವಿವಾದವೇಕೆ ಎಂದು ಪ್ರಶ್ನಿಸಿದ್ದಾರೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್ ತೀರ್ಪು ಶ್ಲಾಘನಾರ್ಹ ಎಂದ ಅವರು ಇಂದು ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರ ಕೇಳಿ ಖುಷಿಯಾಯಿತು ಎಂದರು.