ಸಿದ್ದಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ : ವೈದ್ಯ ಡಾ.ಪರಮೇಶ್ವರ್

ತುಮಕೂರು, ಡಿ.28- ಸಿದ್ಧಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ, ಶಸ್ತ್ರಚಿಕಿತ್ಸೆಯಗಾಯ ವಾಸಿಯಾಗುತ್ತಿದೆ, ಅವರು ಚೇತರಿಸಿಕೊಂಡಿದ್ದು ಪೂಜಾಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದುಅವರ ಆಪ್ತ ವೈದ್ಯಡಾ.ಪರಮೇಶ್ವರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿರುವಅವರು, ನಿನ್ನೆರಾತ್ರಿಯಿಂದ ಶ್ರೀಗಳು ಚೇತರಿಸಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನಕಫಕಟ್ಟಿಕೊಂಡಿದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿತ್ತು. ಬಿಜಿಎಸ್ ವೈದ್ಯರು ಬಂದುಚಿಕಿತ್ಸೆ ನೀಡಿಕಫಕ್ಲಿಯರ್ ಮಾಡಿದರು.ಸಂಜೆ ವೇಳೆಗೆ ಎಲ್ಲವೂ ಸಹಜ ಸ್ಥಿತಿಗೆ ಬಂತು.ವಿಶ್ರಾಂತಿಯ ನಂತರ ಸ್ನಾನ ಮುಗಿಸಿ ಪೂಜೆ ಮಾಡಿದ್ದಾರೆ, ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರಸಾದ ಸೇವನೆ ಕೂಡ ಮಾಡಿದ್ದಾರೆಎಂದು ಮಾಹಿತಿ ನೀಡಿದರು.

ನಿನ್ನೆತಡರಾತ್ರಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಗಮಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು.ಸುಮಾರು 40 ನಿಮಿಷಗಳಿಗೂ ಹೆಚ್ಚು ಕಾಲ ಅವರ ಬಳಿಯೇ ಇದ್ದು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಇಂದು ಬೆಳಗ್ಗೆ 11 ಗಂಟೆಗೆಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿ, ಶ್ರೀಗಳನ್ನು ಭೇಟಿ ಮಾಡಿಆರೋಗ್ಯ ವಿಚಾರಿಸಿದರು.ಕಿರಿಯ ಶ್ರೀಗಳ ಜೊತೆಚರ್ಚೆ ನಡೆಸಿದರು. ಆರೋಗ್ಯದಲ್ಲಿ ದಿನೇದಿನೇ ಚೇತರಿಕೆಕಂಡುಬರುತ್ತಿದ್ದು ಭಕ್ತರುಆತಂಕಪಡುವಅಗತ್ಯವಿಲ್ಲ ಎಂದುಅಭಯ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ