ಬೆಂಗಳೂರು, ಡಿ.28- ಕರ್ನಾಟಕ ತುಂಗ ರಕ್ಷಣಾ ವೇದಿಕೆ ವತಿಯಿಂದ ಇದೇ 30ರಂದು ಬೆಳಗ್ಗೆ 10 ಗಂಟೆಗೆ ಹಸಿವು ನೀಗಿಸುವ ಅನ್ನದ ವಾಹನಕ್ಕೆ ಯಲಹಂಕದ ಚಿಕ್ಕಬೆಟ್ಟಹಳ್ಳಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗುವುದು ಎಂದು ವೇದಿಕೆ ರಾಜ್ಯಾಧ್ಯಕ್ಷ ಎನ್.ಶಂಕರ್‍ನಾಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವೇಳೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು.ಸಂಜೆ 5.30ಕ್ಕೆ ವಿಶೇಷ ಚೇತನರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ನೆಲಗೆದರನಹಳ್ಳಿಯ ಬ್ರಹ್ಮ ದೇವಸ್ಥಾನದ ಅವಧೂತರಾದ ಶ್ರೀ ವೇದಬ್ರಹ್ಮ, ಶ್ರೀ ವಿಜಯಾನಂದ ಜೋಯಿಸರು, ಚಿಕ್ಕಬೆಟ್ಟಹಳ್ಳಿ ಜಮೀರ್ ಮಸೀದಿಯ ಮೈಲಿನ ಮಫ್ತಿ ರಿಜ್ವಾನ್ ರಶೀದ್‍ಸಾಬ್, ಇಮಾಮ್‍ಸಾಬ್, ಇಂಡಿಯನ್ ಬ್ಯಾಪ್ಟಿಸ್ಟ್ ಚರ್ಚ್‍ನ ಫಾದರ್‍ಯಾಕೂಬ್ ಎನ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಆರ್.ವಿಶ್ವನಾಥ್, ಎಸ್‍ಟಿಪಿಎಲ್ ಪಕ್ಷದ ರಾಜ್ಯ ಉಪಾಧ್ಯಕ್ಷ ವಾಜಿದ್‍ಖಾನ್, ಜೆಡಿಎಸ್ ಮುಖಂಡ ಹನುಮಂತೇಗೌಡ್ರು, ಹಿರಿಯ ವಕೀಲ ರಾಮಮೂರ್ತಿರೆಡ್ಡಿ, ಬಿಬಿಎಂಪಿ ಸದಸ್ಯರಾದ ನೇತ್ರಾ ಪಲ್ಲವಿ, ಕುಸುಮಾ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆನಾಥ ಮಕ್ಕಳ ಹಸಿವು ನೀಗಿಸುವ ವಾಹನವನ್ನು ಕರ್ನಾಟಕದಾದ್ಯಂತ ಚಾಲನೆ ನೀಡುವುದು ನನ್ನ ಗುರಿಯಾಗಿದ್ದು, ಈಗಾಗಲೇ ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭ ಮಾಡಿ ರಾಜ್ಯದ ಅನೇಕ ಕಡೆಗಳಲ್ಲಿ ನಿರಂತರವಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ಈ ಸೇವೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು.