ಇಸ್ಲಾಮಾಬಾದ್: ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
2008ರ ಮುಂಬೈ ದಾಳಿ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಸುವಂತೆ ನಮ್ಮ ಸರ್ಕಾರವನ್ನು ಕೇಳಿದ್ದೇನೆ. ಇದೊಂದು ಭಯೋತ್ಪಾದಕ ದಾಳಿಯಾಗಿರುವುದರಿಂದ ವಿಶೇಷ ಕ್ರಮಗಳನ್ನು ಕೈಗೊಂಡು ಪ್ರಕರಣವನ್ನು ಇತ್ಯಾರ್ಥಗೊಳಿಸಲು ನಮ್ಮ ಸರ್ಕಾರದ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
2008ರ ಮುಂಬೈ ದಾಳಿಯನ್ನು ಲಷ್ಕರ್ ಇ ತೊಯ್ಬಾ(ಎಲ್ಇಟಿ) ನಡೆಸಿತ್ತು. ದಾಳಿ ಕುರಿತಂತೆ ಹಲವು ಮಹತ್ವದ ದಾಖಲೆಗಳನ್ನು ಭಾರತ ಪಾಕಿಸ್ತಾನ ಸರ್ಕಾರಕ್ಕೆ ಕೊಟ್ಟಿದ್ದರೂ ಈ ಹಿಂದಿನ ಸರ್ಕಾರ ಇವುಗಳನ್ನು ಅಲ್ಲಗೆಳೆಯುತ್ತಾ ಬಂದಿದ್ದವು.
Resolving 26/11 Mumbai attacks case,Pak interest, says Imran Khan,perpetrated by Pak terror group LeT