ವನಿತೆಯರ ರಕ್ಷಣೆಗಾಗಿ ಪಿಂಕ್ ಪೊಲೀಸ್ ಔಟ್ಪೋಸ್ಟ್ ಆರಂಭ

ಬೆಂಗಳೂರು, ಮಾ.9-ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉದ್ಯಾನ ನಗರಿಯಲ್ಲಿ ವನಿತೆಯರ ರಕ್ಷಣೆಗಾಗಿ ಎರಡು ಪಿಂಕ್ ಔಟ್ಪೋಸ್ಟ್ ಗಳನ್ನೂ ಆರಂಭಿಸಲಾಗಿದೆ.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‍ಎಂಕೆಆರ್‍ವಿ ಮಹಿಳೆಯರ ಕಾಲೇಜು ಬಳಿ ಹಾಗೂ ಬಸವನಗುಡಿ ಪೊಲೀಸ್ ಠಾಣೆ ಸರಹದ್ದಿನ ಬಿಎಂಎಸ್ ಮಹಿಳೆಯರ ಕಾಲೇಜು ಸಮೀಪ ನಿನ್ನೆ ಪಿಂಕ್ ಔಟ್ಪೋಸ್ಟ್ ಗಳನ್ನೂ ಉದ್ಘಾಟಿಸಲಾಗಿದೆ.
ಈ ಎರಡೂ ಔಟ್ಪೋಸ್ಟ್ ಗಳನ್ನೂಳು ಬೆಳಿಗ್ಗೆ 8 ರಿಂದ 8ರವರೆಗೆ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುತ್ತಿದೆ.
ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಮತ್ತು ಅವರ ಸುರಕ್ಷತೆಗೆ ತ್ವರಿತವಾಗಿ ಸ್ಪಂದಿಸಲು ಮಹಿಳೆಯರ ಕಾಲೇಜುಗಳ ಬಳಿ ಔಟ್ಪೋಸ್ಟ್ ಗಳನ್ನೂ  ತೆರೆಯಲಾಗಿದೆ. ಸಮಾಜಘಾತುಕ ಶಕ್ತಿಗಳು ಮತ್ತು ದುಷ್ಕರ್ಮಿಗಳ ಮೇಲೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ