ಡಿ.5ರಿಂದ ಮಹಿಳಾ ಪೆÇಲೀಸ್ ಸೈಕಲ್ ರ್ಯಾಲಿ

ಬೆಂಗಳೂರು,ಡಿ.2- ಸೈಕ್ಲೊಥಾನ್ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಸಹಯೋಗದಲ್ಲಿ ಇದೇ 5ರಿಂದ 9ರವರೆಗೆ ಮಹಿಳಾ ಪೆÇಲೀಸ್ ಸೈಕಲ್ ರ್ಯಾಲಿಯನ್ನು ಹಮ್ಮಿಕೊಂಡಿರುವುದಾಗಿ ಕೆಎಸ್‍ಆರ್‍ಪಿ ವಿಭಾಗದ ಎಡಿಜಿಪಿ ಭಾಸ್ಕರ್‍ರಾವ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ ಮತ್ತು ಬಾಲ್ಯ ವಿವಾಹದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ರ್ಯಾಲಿಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ರ್ಯಾಲಿಯಲ್ಲಿ ಮಹಿಳಾ ಐಪಿಎಸ್, ಐಎಎಸ್ ಅಧಿಕಾರಿಗಳು, ಕೆಎಎಸ್ ಹಾಗೂ ಕೆಎಸ್‍ಪಿಎಸ್ ಅಧಿಕಾರಿಗಳು, ಪೆÇಲೀಸ್ ಕಾನ್‍ಸ್ಟೆಬಲ್‍ಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯಿಂದ ಬೆಂಗಳೂರಿಗೆ ರ್ಯಾಲಿ ನಡೆಯಲಿದ್ದು, ಪ್ರತಿದಿನ 100 ಕಿ.ಮೀ ವರೆಗೂ ರ್ಯಾಲಿ ಸಾಗಲಿದೆ. ಒಟ್ಟು 540 ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.

ಮಹಿಳೆಯರ ಸುರಕ್ಷತೆ ಮಾತ್ರವಲ್ಲದೆ ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿಜಯ್‍ಭಾಸ್ಕರ್ ಹೇಳಿದರು.
ರ್ಯಾಲಿಯ ಮಾರ್ಗದ ಬಗ್ಗೆ ಸರ್ಕಾರಿ ಮಹಿಳಾ ಕಾಲೇಜು ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಾಗುವುದು. 9ರಂದು ವಿಧಾನಸೌಧಕ್ಕೆ ರ್ಯಾಲಿ ತಲುಪಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಿದ್ದಾರೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮೇಯರ್ ಗಂಗಾಂಬಿಕೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ