ಮೇಲುಕೋಟೆಯನ್ನು ಅಭಿವೃದ್ಧಿಪಡಿಸಲಿರುವ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

ಬೆಂಗಳೂರು,ಡಿ.2- ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದ ಹಾಗೆ ಮೇಲುಕೋಟೆಯನ್ನು ಅಭಿವೃದ್ಧಿಪಡಿಸಲಿರುವ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದರು.

ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಮೇಲುಕೋಟೆ ಕ್ಷೇತ್ರ ಧಾರ್ಮಿಕ ನಾಡು. ಇಲ್ಲಿ ಹೊಯ್ಸಳ ಕಾಲದ, ಮೈಸೂರು ಮಹಾರಾಜರ ಕಾಲದ ಕುರುಹುಗಳಿವೆ. ಈ ಕ್ಷೇತ್ರಗಳ ಅಭಿವೃದ್ಧಿ ಕಾರ್ಯ ಮತ್ತು ನಿರ್ವಹಣೆ ಮಾಡಬೇಕಾಗಿದೆ.

ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಮೇಲುಕೋಟೆ ಕ್ಷೇತ್ರ ಧಾರ್ಮಿಕ ನಾಡು. ಇಲ್ಲಿ ಹೊಯ್ಸಳ ಕಾಲದ, ಮೈಸೂರು ಮಹಾರಾಜರ ಕಾಲದ ಕುರುಹುಗಳಿವೆ. ಈ ಕ್ಷೇತ್ರಗಳ ಅಭಿವೃದ್ಧಿ ಕಾರ್ಯ ಮತ್ತು ನಿರ್ವಹಣೆ ಮಾಡಬೇಕಾಗಿದೆ.

ನಾನು ಮೈಸೂರು ದಸರಾ ಉದ್ಘಾಟನೆಗೆ ಬಂದಾಗ ಸರ್ಕಾರದ ಬಳಿ ಈ ಪ್ರಸ್ತಾವನೆ ಇಟ್ಟಿದ್ದೆ.ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಸರ್ಕಾರವು ಕೂಡ ನಮ್ಮೊಂದಿಗೆ ಕೈ ಜೋಡಿಸುವ ಭರವಸೆ ನೀಡಿದೆ.ಮೇಲುಕೋಟೆಯಲ್ಲಿ 100ಕ್ಕೂ ಹೆಚ್ಚು ಕೊಳಗಳಿವೆ. ಮೇಲುಕೋಟೆ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದೇವೆ. ಆದಷ್ಟು ಬೇಗ ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದರು.

ದಸರಾ ಉದ್ಘಾಟನೆ ವೇಳೆ ಕೊಡುಗು ಸಂತ್ರಸ್ತರಿಗೆ ನೆರವು ನೀಡಿ ಎಂದು ಸರ್ಕಾರ ನಮ್ಮನ್ನು ಕೇಳಿರಲಿಲ್ಲ. ಮನುಷ್ಯನ ದೇಹದಲ್ಲಿ ಒಂದು ಭಾಗಕ್ಕೆ ನೋವಾದರೆ ಇನ್ನೊಂದು ಭಾಗಕ್ಕೆ ನೋವಾದ ಹಾಗೆ. ಕೊಡಗು ನಮ್ಮ ಕರ್ನಾಟಕದ ಒಂದು ಭಾಗ.ನಮ್ಮ ಸಂಸ್ಥೆಯೇ ನೆರವಾಗುವ ತೀರ್ಮಾನ ಮಾಡಿತ್ತು.ಯಾರೂ ನಮ್ಮನ್ನು ಕೇಳಿರಲಿಲ್ಲ. ಕನ್ನಡಿಗರಿಗೆ ಏನಾದರೂ ಮಾಡಬೇಕೆಂಬ ಹಿನ್ನೆಲೆಯಲ್ಲಿ 25 ಕೋಟಿ ನೀಡುವ ತೀರ್ಮಾನ ಮಾಡಲಾಗಿತ್ತು ಎಂದರು.
ಸರ್ಕಾರಕ್ಕೆ ನಾವು ಹಣ ನೀಡುವುದಿಲ್ಲ. ಅವರು ನೀಡಿದ ನಕ್ಷೆಯಂತೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಸುಧಾಮೂರ್ತಿ ಹೇಳಿದರು.
ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆ ಅಭಿವೃದ್ದಿಗೆ ಇನ್ಫೋಸಿಸ್ ಸಂಸ್ಥೆ ಮುಂದಾಗಿದೆ. ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.ಮೇಲುಕೋಟೆ ಸಂಪೂರ್ಣ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಲಿದೆ.ಮೇಲುಕೋಟೆಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಲಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ