ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ಪ್ರಶಸ್ತಿ ಪಡೆದಿದ್ದಾರೆ. ಅರೆ ಇದೇನಪ್ಪ ಧೋನಿ ತಂಡದ ಜೊತೆ ಆಸ್ಟ್ರೇಲಿಯಾಕ್ಕೆ ಸರಣಿ ಆಡಲು ಇನ್ನು ಹೋಗಿಲ್ಲ ಅದ್ಹೇಗೆ ಪ್ರಶಸ್ತಿ ಗೆದ್ರು ಅಂತ ನೀವು ಕೇಳಬಹುದು. ಧೋನಿ ಪ್ರಶಸ್ತಿ ಗೆದ್ದಿದ್ದು ಕ್ರಿಕೆಟ್ನಲ್ಲಿ ಅಲ್ಲ ಟೆನ್ನಿಸ್ನಲ್ಲಿ…
ಟೀಮ್ ಇಂಡಿಯಾ ಕಂಡ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ಗಳಲ್ಲಿ ಒಬ್ಬರಾಗಿರುವ ಮಾಹಿ, ಐಸಿಸಿಯ ಎಲ್ಲಾ ಪ್ರತಿಷ್ಠಿತ ಪ್ರಶಸ್ತಿಗಳನ್ನ ದೇಶಕ್ಕೆ ತಂದುಕೊಟ್ಟ ಮೊದಲ ಕ್ಯಾಪ್ಟನ್ ಎನ್ನಿಸಿಕೊಂಡಿದ್ದಾರೆ. ಸದ್ಯ ಟೆಸ್ಟ್ ಮಾದರಿಯಿಂದ ನಿವೃತ್ತಿ ಹೊಂದಿರುವ ಮಾಹಿ, ಒಬ್ಬ ಆಟಗಾರನಾಗಿ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಷ್ಟೇ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ.
ಟೆನ್ನಿಸ್ನಲ್ಲಿ ಕಮಾಲ್ ಮಾಡಿದ ಧೋನಿ
ಯುನಿವರ್ಸಿಟಿ ಆಫ್ ಕ್ರಿಕೆಟ್ ಅಂಥಾನೇ ಫೇಮಸ್ ಆಗಿರುವ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಟೆನ್ನಿಸ್ ಟೂರ್ನಿಯಲ್ಲೂ ಕಮಾಲ್ ಮಾಡಿದ್ದಾರೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಮಾಹಿ, ಫುಟ್ಬಾಲ್, ಕಬ್ಬಡಿ ಸೇರಿದಂತೆ ಈಗ ಟೆನ್ನಿಸ್ನಲ್ಲೂ ಮಿಂಚಿದ್ದಾರೆ.
ಇದೇ ಮೊದಲ ಬಾರಿಗೆ ಟೆನ್ನಿಸ್ ಲೋಕಕ್ಕೆ ಲಗ್ಗೆ ಇಟ್ಟ ಕ್ರಿಕೆಟರ್, ಡಬಲ್ಸ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ . ಕ್ರಿಕೆಟ್ ಸ್ಟೇಡಿಯಂನಲ್ಲಿ ಮಿಂಚಿದ್ದು ಸಾಲದು ಎಂಬಂತೆ, ಟೆನಿಸ್ ಕೋರ್ಟ್ಗೆ ಕಾಲಿಟ್ಟು ಇಲ್ಲೂ ಯಶಸ್ಸು ಗಳಿಸಿದ್ದಾರೆ. ರಾಂಚಿಯಲ್ಲಿ ನಡೆದ ಎSಅಂ ಕಂಟ್ರಿ ಕ್ರಿಕೆಟ್ ಕ್ಲಬ್ ಟೆನ್ನಿಸ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದ ಕ್ಯಾಪ್ಟನ್ಕೂಲ್ ಮಹೇಂದ್ರ ಸಿಂಗ್ ಧೋನಿ, ತಮ್ಮ ಪಾರ್ಟ್ನರ್ ಸುಮಿತ್ ಬಜಾಜ್ ಜೊತೆ ಸೇರಿ ಡಬಲ್ಸ್ ಪ್ರಶಸ್ತಿ ಗೆದ್ದು ಕೊಂಡಿದ್ದಾರೆ.
ಇದುವರೆಗೂ ಧೋನಿಯನ್ನ ಕ್ರಿಕೆಟಿಗನಾಗಿ ಮತ್ತು ಫುಟ್ಬಾಲ್ ಆಟಗಾರನಾಗಿ ನೋಡಿದ್ದ ಅಭಿಮಾನಿಗಳು ಇದೀಗ ಟೆನ್ನಿಸ್ ಆಟಗಾರನಾಗಿ ಹೊರಹೊಮ್ಮಿದನ್ನ ಕಂಡು ಧೋನಿ ಬಹುಮುಖ ಟ್ಯಾಲೆಂಟ್ ಹೊಂದಿರೊ ಟ್ಯಾಲೆಂಟ್ ಕ್ರಿಕೆಟರ್ ಅಂತ ಉದ್ಘಾರಿಸಿದ್ದಾರೆ.