ಶತಕ ಬಾರಿಸಿ ಅಡಿಲೇಡ್​ನಲ್ಲಿ ಆಡಲು ರೆಡಿಯಾದ ಮುರಳಿ ವಿಜಯ್

ಟೀಂ ಇಂಡಿಯಾದ ಸ್ಟೈಲೀಶ್ ಬ್ಯಾಟ್ಸ್​ ಮನ್ ಮುರಳಿ ವಿಜಯ್ ಕ್ರಿಕೆಟ್​ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ಮಿಂಚಿದ್ದಾರೆ. ಓಪನರ್ ಪೃಥ್ವಿ ಗಾಯಗೊಂಡು ಹೊರ ನಡೆದಿರುವ ಸ್ಲಾಟ್​ನಲ್ಲಿ ಆಡಲು ತಾನು ರೆಡಿ ಎಂದು ಬ್ಯಾಟ್​ ಮೂಲಕ ಉತ್ತರಿಸಿದ್ದಾರೆ.
ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ನೀಡಿ ತಂಡದಿಂದ ಗೇಟ್ ಪಾಸ್ ಪಡೆದಿದ್ದ ಸ್ಟೈಲಿಶ್ ಬ್ಯಾಟ್ಸ್ ಮನ್ ಮುರಳಿ ವಿಜಯ್ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಪೃಥ್ವಿ ಶಾ ರಿಪ್ಲೇಸ್ ಮಾಡ್ತಾರಾ ಮುರಳಿ ವಿಜಯ್ ?
ಮೊನ್ನೆ ಅಭ್ಯಾಸ ಪಂದ್ಯದಲ್ಲಿ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಚೆಂಡು ಹಿಡಿಯಲು ಹೋಗಿ ಗಾಯಗೊಂಡ ಮರಿ ಸಚಿನ್ ಫೃಥ್ವಿ ಶಾ ಆಸಿಸ್ ವಿರುದ್ಧ ನಡೆಯಲಿರುವ ಅಡಿಲೇಡ್ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ. ಇದು ಕ್ಯಾಪ್ಟನ್ ಕೊಹ್ಲಿಗೆ ದೊಡ್ಡ ತಲೆ ನೋವಾಗಿತ್ತು. ಓಪನಿಂಗ್ ಸ್ಲಾಟ್​ನಲ್ಲಿ ಯಾರನ್ನ ಕಣಕ್ಕಿಳಿಸಬೇಕೆಂಬ ಪ್ರಶ್ನೆ ಕೊಹ್ಲಿಯನ್ನ ಇನ್ನಿಲ್ಲದಂತೆ ಕಾಡಿತ್ತು.
ಪ್ರಾಕ್ಟೀಸ್ ಮ್ಯಾಚ್​ನಲ್ಲಿ 129 ರನ್ ಗಳಿಸಿದ ಸ್ಟೈಲಿಶ್ ಬ್ಯಾಟ್ಸ್​ಮನ್
ಕ್ರಿಕೆಟ್​ ಆಸ್ಟ್ರೇಲಿಯಾ ವಿರುದ್ಧ ಎರಡನೇ ಇನ್ನಿಂಗ್ಸ್​ನಲ್ಲಿ ಕನ್ನಡಿಗ ರಾಹುಲ್ ಜೊತೆ ಕಣಕ್ಕಿಳಿದ ಮುರಳಿ ವಿಜಯ್ ಎಂದಿನಂತೆ ತಮ್ಮದೇ ಸ್ಟೈಲ್​ನಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ್ರು. 132 ಎಸೆತ ಎದುರಿಸಿದ ಮುರಳಿ 16 ಬೌಂಡರಿ 5 ಸಿಕ್ಸರ್ ಬಾರಿಸಿ 129 ರನ್​ ಗಳಿಸಿದ್ರು. ಆಸ್ಟ್ರೇಲಿಯಾ ವಿರುದ್ಧ ಕೊನೆಯ ದಿನ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿ ಕ್ಯಾಪ್ಟನ್ ಕೊಹ್ಲಿಯ ತಲೆ ನೋವಿಗೆ ಮುಲಾಮು ಹಚ್ಚಿದ್ದಾರೆ.
ಒಂದೇ ಓವರ್​ನಲ್ಲಿ 26 ರನ್​ ಚೆಚ್ಚಿದ ಮುರಳಿ
ಅದರಲ್ಲೂ 39ನೇ ಓವರ್​ನಲ್ಲಿ ದಾಳಿಗಿಳಿದ ಸ್ಪಿನ್ನರ್ ಜಾಕ್​ ಕಾರ್ಡರ್ ಓವರ್​ನಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ ಮುರಳಿ ವಿಜಯ್ ಒಂದೇ ಓವರ್​ನಲ್ಲಿ 26 ರನ್ ಚೆಚ್ಚಿದ್ರು.ಮೊದಲ ಎರಡು ಎಸೆತದಲ್ಲಿ ಬೌಂಡರಿ ಬಾರಿಸಿದ ಮುರಳಿ. ಮೂರನೆ ಎಸೆತವನ್ನ ಸಿಕ್ಸ್ ಬಾರಿಸಿದ್ರು ನಾಲ್ಕನೆ ಎಸೆತದಲ್ಲಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ