ವಾಷಿಂಗ್ಟನ್: ರಷ್ಯಾ ಮತ್ತು ಅಮೆರಿಕ ಮನಡುವಿನ ಶೀತಲ ಸಮರದ ಅಂತ್ಯಕ್ಕೆ ಪ್ರಯತ್ನ ಮಾಡಿದ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ ಬುಶ್ (94) ಸಾವನ್ನಪ್ಪಿದ್ದಾರೆ.
ಬುಶ್ ಮಗ ಈ ಸಂತಾಪದ ವಿಷಯವನ್ನು ತಿಳಿಸಿದ್ದು ಈ ಕುರಿತು ಟ್ವೀಟರ್ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.
ಜಾರ್ಜ್ ಎಚ್. ಡಬ್ಲೂ ಬುಶ್ ಒಬ್ಬ ಅತ್ತುತ್ತಮ ಗುಣವನ್ನು ಹೊಂದಿದ್ದ ವ್ಯಕ್ತಿಯಾಗಿದ್ದು ಉತ್ತಮ ತಂದೆಯಾಗಿದ್ದರು ಎಂದು ತಿಳಿಸಿದ್ದಾರೆ.
ಬುಶ್ ಹೆಂಡತಿ ಬಾರ್ಬರ್ ಬುಶ್ ಕೂಡ ಕಳೆದ ಮಾರ್ಚ್ನಲ್ಲಿ ಸಾವನ್ನಪ್ಪಿದ್ದರು. ಬುಶ್ 5 ಮಕ್ಕಳು ಹಾಗೂ 17 ಮೊಮ್ಮಕ್ಕಳನ್ನು ಹೊಂದಿದ್ದಾರೆ.
ಅತ್ಯುತ್ತಮ ವಿದೇಶಿ ನೀತಿ ನಿರೂಪಕರಾಗಿದ್ದ ಇವರು 1990ರಲ್ಲಿ ಹೊಸ ವಿದೇಶಿ ಆದೇಶವನ್ನು ಪ್ರಕಟಿಸಿದ್ದರು ಸದ್ದಂ ಹುಸೇನ್ ಆಡಳಿತದ ಇರಾಕ್ನಿಂದ ಕುವೈತ್ನನ್ನು ಹೊರಗಟ್ಟಿದರು. ಆದರೆ ಎರಡನೇ ಅವಧಿಯಲ್ಲಿ ತಮ್ಮ ಮಿಲಿಟರಿ ಹಸ್ತಕ್ಷೇಪದಲ್ಲಿ ಸೋಲನ್ನು ಅನುಭವಿಸಿದರು.