ಕನ್ನಡ ಚಿತ್ರರಂಗದ ನಾದಬ್ರಹ್ಮ ಎಂದೇ ಖ್ಯಾತಿಯಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಈಗ ನಿರ್ದೇಶಕರಾಗುತ್ತಿದ್ದಾರೆ. ‘ಶಂಕುತಲೆ’ ಸಿನಿಮಾದ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದು, ಸರಿಗಮಪ ಮ್ಯೂಸಿಕ್ ರಿಯಾಲಿಟಿ ಶೋನಿಂದ ಸ್ವಲ್ಪ ಬಿಡುವು ಮಾಡಿಕೊಂಡಿದ್ದು, ಸಿನಿಮಾದ ಕೆಲಸವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ.ಸಿಟಿ ಎಕ್ಸ್ ಪ್ರೆಸ್ ಗೆ ಈ ವಿಷಯ ತಿಳಿಸಿದ ಹಂಸಲೇಖ, ಇದು ಭಾರತದ ಮೊದಲ ಕಾಲ್ಪನಿಕಾ ಕಥೆ ಸಿನಿಮಾ ಆಗಿದೆ. ಶಕುಂತಲೆ ಸಿನಿಮಾದಲ್ಲಿ ಸಂಗೀತ ಹಾಗೂ ಗ್ರಾಫಿಕ್ಸ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಸಂಗೀತ ಹಾಗೂ ಗ್ರಾಫಿಕ್ ಕೆಲಸ ಎರಡು ತಿಂಗಳಿನಿಂದ ವಿಳಂಬವಾಗುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ. ಇದಾದ ಒಂದೂವರೆ ತಿಂಗಳ ಬಳಿಕ ಕಲಾವಿದರೊಂದಿಗೆ ಚಿತ್ರೀಕರಣ ಆರಂಭಿಸುತ್ತೇನೆ ಎಂದು ಹೇಳಿದರು.ಈ ಚಿತ್ರದಲ್ಲಿ ಶಕುಂತಲೆ ಪಾತ್ರದಲ್ಲಿ ಯಾರೂ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಡಿಸೆಂಬರ್ 9 ಅಥವಾ 12 ರಂದು ಈ ಕುತೂಹಲವನ್ನು ಬಹಿರಂಗಪಡಿಸುವುದಾಗಿ ಹಂಸಲೇಖ ಹೇಳಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಮಾಧುರಿ ಧೀಕ್ಷಿತ್, ಅನುಷ್ಕಾ ಮತ್ತಿತರ ಹೆಸರು ಕೇಳಿಬರುತ್ತಿದೆ.ಶಕುಂತಲೆ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿರಲಿದೆ. ಆದರೆ, ಮುಖ್ಯ ಪಾತ್ರ ಹೊಸ ಮುಖವಾಗಿರುತ್ತದೆ ಎಂದು ಹಂಸಲೇಖ ತಿಳಿಸಿದರು.