ಮನುಷ್ಯನ ಜೀವನವೇ ರಕ್ಷಿತ್ ಶೆಟ್ಟಿ ‘ಪುಣ್ಯಕೋಟಿ’ ಚಿತ್ರಕ್ಕೆ ಕಥೆ!

ಬೆಂಗಳೂರು: ಪುಣ್ಯಕೋಟಿ ಕಥೆ ಕೇಳದವರಾರು? ಸತ್ಯ ಪರಿಪಾಲನೆ, ಪ್ರಾಮಾಣಿಕತೆಗೆ ಹೆಸರಾದ ಹಸು ಹಾಗೂ ಹಸಿದ ಹುಲಿಯ ನಡುವಿನ ಈ ಕಥೆಯು ಕನ್ನಡ ಜನರ ಮನೆ ಮನಗಳಲ್ಲಿ ಸದಾ ಹಸಿರಾಗಿದೆ. ವಿಷಯವೇನೆಂದರೆ  ನೈತಿಕ ಹಿನ್ನೆಲೆಯುಳ್ಳ ಈ ಕಥೆಯನ್ನು ಮತ್ತೆ ತೆರೆ ಮೇಲೆ ತರಲು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ತೀರ್ಮಾನಿಸಿದ್ದಾರೆ.
“ಉಳಿದವರು ಕಂಡಂತೆ” ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದ ಎರಡನೇ ಚಿತ್ರ “ಪುಣ್ಯಕೋಟಿ” ಆಗಿದ್ದು ಇದೇ ದೀಪಾವಳಿಗೆ ಅವರು ಚಿತ್ರದ ಕುರಿತು ಸ್ನೇಹಿತ, ಅಭಿಮಾನಿಗಳೊದಿಗೆ ಹಂಚಿಕೊಂಡಿದ್ದಾರೆ.
ಚಿತ್ರದ ಒಂದು ಸಾಲಿನ ಕಥೆ ಇದಾಗಲೇ ಸಿದ್ದವಾಗಿದ್ದು ಸಂಬಾಷಣೆ ಬರವಣಿಗೆಯಲ್ಲಿ ತೊಡಗಿಕೊಂಡಿರುವುದಾಗಿ ರಕ್ಷಿತ್ ಹೇಳಿದ್ದಾರೆ.”ಇದಾಗಲೇ ಕಥೆಯು ನನ್ನ ಮನಸ್ಸಿನಲ್ಲಿ ನಿಂತಿದ್ದು ಇದನ್ನು ಕಾಗದದ ಮೇಲೆ ಮೂಡಿಸುವುದಷ್ಟೇ ಬಾಕಿ ಇದೆ.” ಅವರು ಹೇಳಿದರು.
“ಸಧ್ಯ ನಾನು ಅವನೇ ಶ್ರೀಮನ್ನಾರಾಯಣದಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ನನಗೆ ಎಂದಿಗೂ ನನ್ನ ಮೊದಲ ಚಿತ್ರಕ್ಕಿಂತ ಭಿನ್ನವಾದ, ದೊಡ್ಡ ಯೋಜನೆ ತಯಾರಿಸಬೇಕೆಂದು ಮನಸ್ಸಿನಲ್ಲಿತ್ತು. ಪುಣ್ಯಕೋಟಿ ಕಥೆ ನನಗೆ ಇಷ್ಟವಾಗಿದ್ದು ಇದನ್ನು ತೆರೆ ಮೇಲೆ ಕಾಣಿಸಲು ಮುಂದಾಗಿದ್ದೇನೆ. ಗೇಮ್ ಆಫ್ ಥ್ರೋನ್ಸ್ ನಂತಹಾ ಸರಣಿ ನೋಡಿದಾಗೆಲ್ಲ ಕನ್ನಡದಲ್ಲಿ ಸಹ ಇಂತಹಾ ಕಾರ್ಯಕ್ರಮ, ಚಿತ್ರಗಳು ತಯಾರಾಗಬೇಕು ಎನ್ನುವುದು ನನ್ನ ಮನಸ್ಸಿನಲ್ಲಿ ಮೂಡಿತ್ತು.”
“ವಿಶೇಷವಾಗಿ, ಪ್ರತಿ ಕನ್ನಡಿಗ ತನ್ನ ಶಾಲಾ ದಿನಗಳಲಿ ಈ ಕಥೆಯನ್ನು8 ರಿಂದ 9 ಪುಟಗಳಷ್ಟಾದರೂ ಕೇಳಿರುತ್ತಾನೆ.ವಾಸ್ತವವಾಗಿ, ನಾವು ಕಲಿಯಲು ಸಂತಸ ಪಡುತ್ತಿದ್ದ ಈ ಪುಣ್ಯಕೋಟಿ ಹಾಡು ನಮಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಶಿಕ್ಷಕರು ಅದು ಯಾವಾಗ ಬರುತ್ತಾರೆ, ನಮಗೆ ಇದನ್ನು ಮತ್ತೆ ಕಂಠಪಾಠದಲ್ಲಿ ಒಪ್ಪಿಸಲು ಕೇಳುತ್ತಾರೆಂದು ನಾವು ಕಾಯುತ್ತಿದ್ದದ್ದು ಇದೆ. ನಾನಿಂದು ಮತ್ತೆ ಆ ಕಥೆಯನ್ನು ತೆರೆ ಮೇಲೆ ತರಲು ಬಯಸಿದ್ದೇನೆ.”
“ನನ್ನ ಬಾಲ್ಯದಲ್ಲಿ ಕೇಳಿದ ಈ ಪುಣ್ಯಕೋಟಿ ಹಾಡಿನ ಕುರಿತು ನನಗೆ ಇಂದಿಗೂ ನಂಬಿಕೆ ಇದೆ. ನನ್ನ ಚಿತ್ರದಲ್ಲಿ ಇದನ್ನು ಆರ್ಕೆಸ್ಟ್ರಾ ಹಿನ್ನೆಲೆಯಲ್ಲಿ ಪ್ರದರ್ಶಿಸಲು ಬಯಸಿದ್ದೇನೆ. ಪುಣ್ಯಕೋಟಿ ಎನ್ನುವ್ಬುದು ಹಸು ಹಾಗೂ ಹುಲಿ ನಡುವೆ ನಡೆವ ಸಿಂಪಲ್ ಸ್ಟೋರಿ. ಆದರೆ ನಾನದಕ್ಕೆ ಬಹಳಷ್ಟು ಸೇರಿಸಬೇಕೆಂದು ಅಂದುಕೊಂಡಿದ್ದೇನೆ. ಕಥೆಗೆ ಮಾನವೀಯ ಸ್ಪರ್ಶ ನೀಡುವುದು ನನ್ನ ಗುರಿ.ನಾನು ಕಥೆಯ ನಿರ್ಮಾಣಕ್ಕೆ ಸಾಕಷ್ಟು ಸ್ವಾತಂತ್ರ ಪಡೆದಿದ್ದೇನೆ. ಇದು ಒಂದು ಪುರಾತನ ಕಾಲದಲ್ಲಿ ನಡೆದ ಘಟನೆಯಾಗಿ ನಾನು ತೋರಿಸಲಿದ್ದೇನೆ. ನಾನು ಮೊದಲಿನಿಂದ ಪುರಾಣಗಳ ಅಭಿಮಾನಿಯಾಗಿದ್ದು ನನಗೆ ಇಂತಹಾ ಕಥೆಗಳು ಸಾಕಶ್ಃಟು ಮನಸ್ಸಿಗೆ ತಟ್ಟುತ್ತವೆ.”
“ಪುಣ್ಯಕೋಟಿ ಒಂದು ಜಾಗತಿಕ ಮಟ್ಟದ ಚಿತ್ರವಾಗಿದೆ. ಆದರೆ ಸದ್ಯ ಚಿತ್ರದ ಬಜೆಟ್ ಎಷ್ಟಾಗಲಿದೆ ಎನ್ನುವುದನ್ನು ಚಿಂತಿಸಿಲ್ಲ.ನನ್ನ ಪಾಲಿಗೆ ಇದೊಂದು ಮಹಾಕಾವ್ಯವಾಗಲಿದೆ. ಇದಕ್ಕಾಗಿ ನೀವು ರೂ 15 ಕೋಟಿ, 30 ಕೋಟಿ ರೂ, 100 ಕೋಟಿ ರೂ ಅಥವಾ 200 ಕೋಟಿ ರೂ ಖರ್ಚು ಮಾಡಬಹುದು. ಕೆಲವೊಮ್ಮೆ ಇಷ್ಟು ಬಜೆಟ್ ಅಗತ್ಯವಿರದಿದ್ದರೂ ಸಹ ಚಿತ್ರದ ಕ್ಯಾನ್ವಾಸ್ ಗೆ ಇದರಿಂದ ಲಾಭವಾಗಲಿದೆ.ನನಗೆ ಚಿತ್ರದ ಕಥೆಯೇ ಮುಖ್ಯ, ಬಜೆಟ್ ಎಷ್ಟೆನ್ನುವುದು ಮುಖ್ಯವಾಗಿ ನಾನು ಪರಿಗಣಿಸುವುದಿಲ್ಲ”
“ಚಿತ್ರ ಉತ್ತಮವಾದುದಾದರೆ, ಜಗತ್ತಿನಾದ್ಯಂತ ನನ್ನ ಚಿತ್ರವನ್ನು ಸ್ವೀಕರಿಸಲು ತಯಾರಾಗುತ್ತಾರೆ.ನಾನು ನನ್ನ ಚಿತ್ರಕ್ಕೆ ಹಣ ಹೂಡುವವರ ಕುರಿತು ನ್=ಇನ್ನೂ ನಿರ್ಧರಿಸಿಲ್ಲ. ನನ್ನ ಸ್ನೇಹಿತರು, ಹಿತೈಷಿಗಳೊಡನೆ ಚರ್ಚಿಸಿ ಯಾರೇ ಇದಕ್ಕೆ ಹಣ ತೊಡಗಿಸುವರೋ ನೋಡಬೇಕಿದೆ”  ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ