ಜಮ್ಮು : ಬಿಜೆಪಿ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಹತ್ಯೆಗೈದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಕಿಶ್‌ತ್‌ವಾರ್ ನಲ್ಲಿ ಹೇರಲಾಗಿದ್ದ ಕರ್ಫ್ಯೂ ಇದೀಗ ಐದನೇ ದಿನವೂ ಮುಂದುವರೆದಿದೆ.
ಈ ನಡುವೆ ಶನಿವಾರ ಮತ್ತು ಭಾನುವಾರ ಅನುಕ್ರಮವಾಗಿ 2 ಮತ್ತು 4 ತಾಸುಗಳ ಮಟ್ಟಿಗೆ ಕರ್ಫ್ಯೂ ಸಡಿಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಕೂಡ ಕರ್ಫ್ಯೂ ಮುಂದುವರಿದಿದ್ದು, ಅದರಲ್ಲಿನ ಯಾವುದೇ ಸಡಿಲಿಕೆ ಬಗ್ಗೆ ಬಳಿಕ ನಿರ್ಧರಿಸಲಾಗುವುದು ಎಂದು ಕಿಶ್‌ತ್ ವಾರ್ ಜಿಲ್ಲಾಭಿವೃದ್ಧಿ ಆಯುಕ್ತ ಅಂಗ್ರೇಜ್ ಸಿಂಗ್ ರಾಣಾ ತಿಳಿಸಿದ್ದಾರೆ.
ಜಿಲ್ಲೆಯಲ್ಲೀಗ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ , ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿವಾರ್ ಮತ್ತು ಅವರ ಸಹೋದರ ಅಜಿತ್ ಅವರ ಹತ್ಯೆಯಲ್ಲಿ ಶಾಮೀಲಾಗಿರುವವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
curfew-continues-for-fifth-day-in-jmmu-kashmir, kishtwar-district