![Profile Shoot of Karnataka Chief Minister K Siddaramaiah](http://kannada.vartamitra.com/wp-content/uploads/2018/02/siddaramaiah.jpg)
ಬಿಜೆಪಿ ಅವರಷ್ಟು ಕೀಳುಮಟ್ಟಕ್ಕೆ ಇಳಿದು ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮಾ.7- ಬಿಜೆಪಿಯವರಿಗೆ ಭಾಷೆ, ಸಂಸ್ಕøತಿ, ಪರಿಜ್ಞಾನ ಏನೂ ಇಲ್ಲ. ಅವರಷ್ಟು ಕೀಳುಮಟ್ಟಕ್ಕೆ ಇಳಿದು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಆರೋಪಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ನಳಿನ್ಕುಮಾರ್ ಕಟಿಲ್, ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ತಮ್ಮ ನಾಯಕರನ್ನು ಮೆಚ್ಚಿಸಲು ಮನಬಂದಂತೆ ಮಾತನಾಡುತ್ತಾರೆ. ಕೀಳುಮಟ್ಟದ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಹೇಳಿಕೆಗಳು ಅವರ ಯೋಗ್ಯತೆ, ಸಂಸ್ಕøತಿಯನ್ನು ಬಿಂಬಿಸುತ್ತವೆ. ಅವರ ವರಿಷ್ಠರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಚುನಾವಣೆಯಲ್ಲಿ ಜನತೆ ಅವರಿಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಅವರ ಪ್ರಚೋದನಾಕಾರಿ ಹೇಳಿಕೆ, ಅವರು ಬಳಸುವ ಭಾಷೆ ಎಲ್ಲದಕ್ಕೂ ಜನ ಉತ್ತರ ನೀಡಲಿದ್ದಾರೆ. ಸಂಸದೆ ಶೋಭಾ ಅವರ ಹೇಳಿಕೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದೆ. ನಾನು 40 ವರ್ಷ ರಾಜಕೀಯದಲ್ಲಿದ್ದೇನೆ. ನನಗೂ ಮಾತನಾಡಲು ಬರುತ್ತದೆ. ಆದರೆ, ಅವರ ಮಟ್ಟಕ್ಕೆ ಇಳಿದು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಪುನರುಚ್ಚರಿಸಿದರು.