ರಫೇಲ್ ಡೀಲ್ ಮಾಹಿತಿಯನ್ನು ಸುಪ್ರೀಂ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಬಹುಕೋಟಿ ರಫೇಲ್ ಡೀಲ್‌ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಮಾಹಿತಿಯನ್ನು ನೀಡಲು ಕೇಂದ್ರ ಸರಕಾರ ಒಪ್ಪುತ್ತಿಲ್ಲ ಎನ್ನಲಾಗಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಮತ್ತು ಅದರ ಬೆಲೆ ಮತ್ತಿತರ ಮಾಹಿತಿ ಕುರಿತು ಭದ್ರತಾ ಮತ್ತು ಮಿಲಿಟರಿ ಗೌಪ್ಯತೆಯ ಕಾರಣದಡಿ ವಿವರ ಬಹಿರಂಗಪಡಿಸದಿರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸುಪ್ರೀಂಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯಿದೆ.

ರಫೇಲ್ ಜೆಟ್ ಖರೀದಿ ಕುರಿತಂತೆ ಬೆಲೆ ಮತ್ತಿತರ ವಿವರಗಳನ್ನು 10 ದಿನದೊಳಗೆ ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಬೇಕು ಎಂದು ಬುಧವಾರವಷ್ಟೇ ಕೇಂದ್ರ ಸರಕಾರಕ್ಕೆ ಸುಪ್ರೀಂ ಸೂಚಿಸಿತ್ತು. ಈ ಸೂಚನೆ ಬೆನ್ನಲ್ಲೇ, ಅಫಿಡವಿಟ್ ಸಲ್ಲಿಸಿ, ಬೆಲೆ ವಿವರ ಬಹಿರಂಗಪಡಿಸದಿರಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ಜತೆಗೆ ಸಂಫೂರ್ಣವಾಗಿ ಸಜ್ಜುಗೊಂಡ ರಫೇಲ್ ಜೆಟ್ ಕುರಿತ ಮಾಹಿತಿಯನ್ನು ಕೇಂದ್ರ ಸಂಸತ್ತಿಗೆ ತಿಳಿಸಿಲ್ಲ ಎಂದು ಮೂಲಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ