ಶಬರಿಮಲೆ ಹಿಂಸಾಚಾರಕ್ಕೆ ಅಮಿತ್ ಶಾ ಹೇಳಿಕೆಗಳೇ ಕಾರಣ: ಸಿಪಿಐ-ಎಂ ಕಿಡಿ

ತಿರುವನಂತಪುರಂ: ಶಬಲಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಆರಂಭವಾಗಿರುವ ವಿವಾದ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಆಡಳಿತಾರೂಢ ಸಿಪಿಐ-ಎಂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿಕಾರಿದೆ.

ಶಬರಿಮಲೆಯಲ್ಲಿ ಹಿಂಸಾಚಾರಕ್ಕೆ ಕಾರಣ ಯಾರು ಎಂಬುದನ್ನು ಅಮಿತ್ ಶಾ ಅವರ ಹೇಳಿಕೆಯೇ ತೋರಿಸುತ್ತದೆ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಹೇಳಿದೆ. ಸ್ವಾಮಿ ಸಂದೀಪಾನಂದ ಗಿರಿ ಅವರ ಆಶ್ರಮದ ಮೇಲೆ ನಡೆದಿರುವ ದಾಳಿಗೂ ಅಮಿತ್ ಶಾ ಅವರ ಹೇಳಿಕೆಯೇ ಪ್ರಚೋದನೆ. ಸುಪ್ರೀಂ ಕೋರ್ಟ್ ತೀರ್ಪನ್ನೇ ಟೀಕಿಸುವಂತಿರುವ ಅಮಿತ್ ಶಾ ಅವರ ಹೇಳಿಕೆ ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ ನಿಂದನೆ ಎಂದು ಹೇಳಿದೆ.

ಶಬರಿಮಲೆ ದೇವಾಲಯದ ಸಂಪ್ರದಾಯಗಳನ್ನು ಮುರಿದರೆ ಕೇರಳ ಸರ್ಕಾರವನ್ನು ಕಿತ್ತೊಗೆಯಬೇಕಾಗುತ್ತದೆ ಎಂದು ಅಮಿತ್ ಶಾ ಎಚ್ಚರಿಸಿದ್ದರು. ಶಾ ಅವರ ಹೇಳಿಕೆ ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಸಿಪಿಐ-ಎಂ ಆರೋಪಿಸಿದೆ ಅಲ್ಲದೇ ಕೇರಳದ ಜನತೆ ಬಿಜೆಪಿ-ಆರ್ ಎಸ್ಎಸ್ ನ್ನು ಒಪ್ಪುವುದಿಲ್ಲ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ