ವಿಜಯನಗರ ಸಾಮ್ರಾಜ್ಯ ಪತನಕ್ಕೆ ಅಲ್ಲಿನ ಆತಂರಿಕ ಸಂಘರ್ಷ ಕಾರಣ: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್

ಬೆಂಗಳೂರು, ಅ.28- ವಿಜಯನಗರ ಸಾಮ್ರಾಜ್ಯ ಪತನಕ್ಕೆ ಅಲ್ಲಿನ ಆತಂರಿಕ ಸಂಘರ್ಷ ಕಾರಣವಾಗಿದೆ. ಆದರೆ, ಇತಿಹಾಸಕಾರರು ಅದನ್ನು ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಎಂದು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು.

ನಗರದ ಅಶೋಕ ಹೋಟೆಲ್‍ನಲ್ಲಿ ನಡೆಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಅಡಿossiಟಿg ಣo ಊಚಿmಠಿi: ಂ ಆಡಿಚಿmಚಿಣiಛಿ ಇxಠಿಟoಡಿಚಿಣioಟಿ oಜಿ ಣhe ಗಿiರಿಚಿಥಿಟಿಚಿgಚಿಡಿಚಿ ಅಚಿಣಚಿsಣಡಿoಠಿhe ಪುಸ್ತಕ ಕುರಿತು ವಿವರಣೆ ನೀಡಿದ ಅವರು, ನನ್ನ ನೂರು ನಾಟಕಗಳಲ್ಲಿ ರಕ್ಕಸ ತಂಗಡಿ ನಾಟಕ ವಿಜಯನಗರ ಸಾಮ್ಯಾಜ್ಯ ಪತನದ ಬಗ್ಗೆ ವಿಶ್ಲೇಷಣೆ ನೀಡಿದೆ. 11ನೇ ಶತಮಾನದಲ್ಲಿ ನಡೆಯುವ ಬಸವಣ್ಣ ಅವರ ವಚನ ಕ್ರಾಂತಿ, 1799ರಲ್ಲಿ ಟಿಪ್ಪು ಸುಲ್ತಾನ್ ನಡೆಸುವ ಸ್ವಾತಂತ್ರ್ಯ ಹೋರಾಟ ಕ್ರಾಂತಿ ನಡುವೆ 1565ರಲ್ಲಿ ತಾಳಿಕೋಟೆ ಮತ್ತು ರಕ್ಕಸತಂಗಡಿ ಯುದ್ಧಗಳು ನಡೆಯುತ್ತವೆ. ಈ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಳ್ಳುತ್ತದೆ. ಸುಮಾರು ಮೂರ್ನಾಲ್ಕು ಮಂದಿ ವಿದೇಶಿ ಇತಿಹಾಸಕಾರರು ಈ ಯುದ್ಧವನ್ನು ಉತ್ತರ ಭಾಗದಿಂದ ದಂಡೆತ್ತಿ ಬಂದ ಮುಸ್ಲಿಂ ದೊರೆಗಳು ಹಿಂದು ಸಾಮ್ರಾಜ್ಯದ ಮೇಲೆ ನಡೆಸಿದ ಯುದ್ಧ ಎಂದು ಬಿಂಬಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯ ಮತನಕ್ಕೆ ಮುಸ್ಲಿಂರ ದಾಳಿಯೇ ಕಾರಣ ಎಂಬ ವಿಶ್ಲೇಷಣೆ ಇದೆ. ಆದರೆ, ಇದಕ್ಕಿಂತಲೂ ಪ್ರಮುಖ ಕಾರಣ ವಿಜಯನಗರ ಸಾಮ್ರಾಜ್ಯದೊಳಗಿನ ಸಂಘರ್ಷ ಕಾರಣ. ಆದರೆ, ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯ ರಾಜ್ಯಾಡಳಿತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಆತನನ್ನು ರಾಜ ಎಂದು ಪಟ್ಟಾಭಿಷೇಕ ಮಾಡಿರಲಿಲ್ಲ. ಇದರಿಂದ ಆತ ಅಸಮಾಧಾನಗೊಂಡಿದ್ದ, ಹೀಗಾಗಿ ಯುದ್ಧ ವೇಳೆ ವೈಫಲ್ಯಗಳಾದವು. ವಿಜಯನಗರ ಸಾಮ್ರಾಜ್ಯ ಪತನವಾಯಿತು. ಇತಿಹಾಸ ತಿಳಿಯದವರು ಇತಿಹಾಸ ಬರೆಯುವುದರಿಂದ ಅದು ಅಪಾರ್ಥಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ನನಗೆ ತಾಳಿಕೋಟೆ ಮತ್ತು ರಕ್ಕಸತಂಗಡಿ ಯುದ್ಧದ ಬಗ್ಗೆ ಅಭ್ಯಾಯಮಾನವಿದೆ. ಅಲ್ಲಿನ ಬೆಳವಣಿಗೆಯ ಬಗ್ಗೆ ನೈಜ್ಯವಾದ ನೆಲೆಯಲ್ಲಿ ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡಿದ್ದೇನೆ. ಈಗ ರಾಜಕೀಯವಾಗಿ ನಡೆದಿರುವ ಮಹಾನ್‍ಘಟಬಂಧನ್ ಮಾದರಿಯಲ್ಲೇ ಆಗಲೂ ಹೊಂದಾಣಿಕೆಯಾಗಿದ್ದವು ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ವಾತಾವರಣದಲ್ಲಿ ವಾಯುಮಾಲಿನ್ಯದ ಬಗ್ಗೆ ಮಾತನಾಡಿದ ಗಿರೀಶ್‍ಕಾರ್ನಾಡ್, ಎಲ್ಲಾ ಕಡೆ ಅಶುದ್ಧ ಗಾಳಿಯಿದ್ದು, ಅದನ್ನೇ ಕುಡಿಯುವಂತಾಗಿದೆ. ಅದಕ್ಕಾಗಿ ನಾನು ಮೂಗಿಗೆ ಪೈಪ್‍ಸುತ್ತಿಕೊಂಡು ಶುದ್ಧ ಗಾಳಿ ಕುಡಿಯುತ್ತಿದ್ದೇನೆ ಎಂದು ಹೇಳಿದರು.
ಖ್ಯಾತ ರಂಗಕರ್ಮಿ ಅರುಂಧತಿನಾಗ್, ವಿಮರ್ಶಕರಾದ ಟಿ.ಎನ್.ರಾಮಚಂದ್ರನ್, ಹಿರಿಯ ಪತ್ರಕರ್ತೆ ದೀಪಾಗಣೇಶ್ ಮತ್ತಿತರರು ವೇದಿಕೆಯಲ್ಲಿದ್ದು ಕೃತಿಯ ಬಗ್ಗೆ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ