ಬೆಂಗಳೂರು, ಅ.27-ವೃತ್ತಿಯಲ್ಲಿ ಉಪನ್ಯಾಸಕರಾಗಿ ಪ್ರವೃತ್ತಿಯಲ್ಲಿ ವೈದ್ಯರಾಗಿ ಎರಡೂ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಚ್.ಹನುಮಂತರಾಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಆರ್.ಪ್ರಕಾಶ್ ಮನವಿ ಮಾಡಿದ್ದಾರೆ.
ಕನ್ನಡ ಕಟ್ಟಾಳುಗಳಾದ ತ.ಸು.ಶಾಮರಾಯ, ಬಸವಾರಾಧ್ಯರು, ದೇ. ಜವರೇಗೌಡರೊಂದಿಗೆ ಕನ್ನಡ ಕಾರ್ಯಾಗಾರಗಳಲ್ಲಿ ಸೇವೆ ಸಲ್ಲಿಸಿರುವ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಏಕಲವ್ಯ ಪ್ರಶಸ್ತಿ, ಸ್ವಯಂ ಸಿದ್ಧ ವೈದ್ಯ ಪ್ರಶಸ್ತಿ ಗಳಿಸಿರುವ ಇವರು ಸಮಾಜ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಇಂತಹ ಮಹನೀಯರಿಗೆ ರಾಜ್ಯ ಪ್ರಶಸ್ತಿ ನೀಡುವುದು ನಾಡಿಗೆ ಗೌರವ ನೀಡಿದಂತೆ ಎಂದು ಹೇಳಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಈ ಬಾರಿ ಎಚ್.ಹನುಮಂತರಾಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕೋರುವುದಾಗಿ ತಿಳಿಸಿದ್ದಾರೆ.