ಬೆಂಗಳೂರು, ಅ.27- ಭಾರತದ ಪ್ರಮುಖ ಬಸ್ ಟಿಕೆಟ್ ಬುಕಿಂಗ್ ಮಾಡುವ ತಾಣವಾದ ಟ್ರಾವೆಲ್ ಯಾರಿ ಹಲವು ಬಗೆಯ ಕೊಡುಗೆಗಳನ್ನು ಘೋಷಿಸಿದೆ. ಪ್ರಿವಿಲೇಜ್ ಕಾರ್ಡ್, ಒಳ ಕೊಡುಗೆಗಳು, ಮಲ್ಟಿಪಲ್ ಬುಕಿಂಗ್ಸ್, ಸೃಜನಾತ್ಮಕ ಕೊಡುಗೆ ಮತ್ತು ಹೆಚ್ಚುವರಿ ಡಿಸ್ಕೌಂಟ್ಗಳನ್ನು ವಾಲೆಟ್ ಮೂಲಕ ನೀಡುತ್ತಿದೆ.
ನವೆಂಬರ್ 2ರಿಂದ 15 ನವೆಂಬರ್ ಒಳಗೆ ಎಲ್ಲಿಗಾದರೂ ಪ್ರಯಾಣಿಸುವ ಉದ್ದೇಶವಿಟ್ಟುಕೊಂಡಿದ್ದರೆ, 100ರ ವರೆಗೆ ಶೇ 10ರಷ್ಟು ರಿಯಾಯಿತಿ ಪಡೆಯಬಹುದು. ಈ ಕೊಡುಗೆ 31 ಅಕ್ಟೋಬರ್ ವರೆಗೆ ಲಭಿಸಲಿದೆ. ಈ ಕೂಪನ್ ಕೋಡ್ ಅನ್ನು ದಿನದಲ್ಲಿ ಎರಡು ಬಾರಿ ಬಳಸಬಹುದು.
ಅಪ್ಯಾರಿ ಎಂಬ ಯೋಜನೆಯಡಿ 75 ರೂ ವರೆಗೆ ಮೊದಲ ಬಾರಿಗೆ ಆಪ್ ಮೂಲಕ ಕೂಪನ್ ಕೋಡ್ ಬಳಸುವವರಿಗೆ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ವೆಬ್ಯಾರಿಯಲ್ಲಿ ಮೊದಲ ಬಾರಿಗೆ ವೆಬ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ಇಲ್ಲದರೆ ಫೇಸ್ಟಿವ್ 100 ಎಂಬ ಯೋಜನೆಯಲ್ಲಿ ಟ್ರಾವೆಲ್ ಯಾರಿ ಸಂಸ್ಥೆಯು ವಿಶೇಷ ಕೂಪನ್ ಬಿಡುಗಡೆ ಮಾಡಿದ್ದು, ಇದು ಅಕ್ಟೋಬರ್ 2018ರ ವರೆಗೆ ರೂ.100ರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದನ್ನು ಪ್ರಯಾಣಿಕರು ತಮ್ಮ ಪ್ರಯಾಣದ ಸಂದರ್ಭದಲ್ಲಿ ಎರಡು ಬಾರಿ ಬಳಸಬಹುದು. ಒಸಿಟಿ200 ಎಂಬ ಯೋಜನೆಯಲ್ಲಿ ಒಸಿಟಿ 200 ಕೋಡ್ ಮೂಲಕ ಟಿಕೆಟ್ ಬುಕ್ ಮಾಡಿದರೆ 2000 ರೂಪಾಯಿ ವರೆಗಿನ ಟಿಕೆಟ್ ಗೆ 200 ರೂಪಾಯಿ ವರೆಗೆ ರಿಯಾಯಿತಿ ಪಡೆಯಬಹುದು. ಈ ವಿಶೇಷ ಕೊಡುಗೆ ಅಕ್ಟೋಬರ್ 31ರ ವರೆಗೆ ಇರಲಿದೆ. ಇದನ್ನು ಗ್ರಾಹಕರು ದಿನದಲ್ಲಿ ಎರಡು ಬಾರಿ ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.