ಬಿ ಸರಣಿಯ ಬಂಡವಾಳ ಹೂಡಿಕೆಯಲ್ಲಿ 50 ಮಿಲಿಯನ್ ಡಾಲರ್ ಭದ್ರತೆ ಸಾಧಿಸಿದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆ

ಬೆಂಗಳೂರು, ಅ.27- ಭಾರತದ ಪ್ರಮುಖ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸುವ ನೆರವಾಗುವ ಪ್ರಮುಖ ತಾಣಗಳಲ್ಲಿ ಒಂದಾದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು, ಬಿ ಸರಣಿಯ ಬಂಡವಾಳ ಹೂಡಿಕೆ ವಿಭಾಗದಲ್ಲಿ 50 ಮಿಲಿಯನ್ ಡಾಲರ್ ಭದ್ರತೆ ಸಾಧಿಸಿರುವುದಾಗಿ ಘೋಷಿಸಿದೆ.

ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು, ತನ್ನ ಗ್ರಾಹಕರಿಗಾಗಿ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರಿಗೆ, ವ್ಯಾಪಾರ ವಹಿವಾಟು ನಡೆಸುವವರಿಗೆ ಜಿಎಸ್ ಟಿ ಮತ್ತು ಇ-ವೇ ಬಿಲ್‍ಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸುತ್ತಿದೆ. ಸುಮಾರು 2.5 ಮಿಲಿಯನ್‍ಗೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಈ ವರ್ಷ ಕ್ಲಿಯರ್ ಟ್ಯಾಕ್ಸ್ ಸೇವೆ ಪಡೆದುಕೊಂಡಿದ್ದಾರೆ.

ಸಂಸ್ಥೆಯು ಈಗಾಗಲೇ 25,000 ಚಾರ್ಟೆಡ್ ಅಕೌಂಟೆಂಟ್ ಮತ್ತು 1 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿಗೆ ಅದರಲ್ಲೂ ಎಲ್ಲ ವಿಧದ ಮತ್ತು ಎಲ್ಲ ಕೇತ್ರದ ವ್ಯಾಪಾರಿಗಳಿಗೆ ಬಹು ವಿಧದಲ್ಲಿ ನೆರವಾಗುತ್ತದೆ.

ಸಂಸ್ಥೆಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ಅತ್ಯಂತ ಸರಳವಾಗಿದ್ದು, ಕೇವಲ 4 ಸುಲಭ ಹಂತಗಳಲ್ಲಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ. ಸರ್ಕಾರದ ಜಿ ಎಸ್ ಟಿ ನಿಯಮಗಳಿಗೆ ತಕ್ಕಂತೆ ನಮ್ಮ ಸಂಸ್ಥೆಯು ಎಲ್ಲ ವಿಧಧ ಸಂಸ್ಥೆಗಳಿಗೆ, ರಿಟರ್ನ್ಸ್ ಸಲ್ಲಿಸಲು ನೆರವಾಗುತ್ತಿದೆ. ಈ ಹೊಸ ಬಂಡವಾಳದಿಂದಾಗಿ ನಮ್ಮ ಗುರಿಯನ್ನು ಮತ್ತಷ್ಟು ಸುಲಭವಾಗಿ ಮುಟ್ಟಲು ಮತ್ತು ತಂತ್ರಜ್ಞಾನ ಬಳಸಿಕೊಂಡು ತ್ವರಿತಗತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ನೆರವಾಗಲಿದೆ ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ ಸಂಸ್ಥಾಪಕ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ