ಬೆಂಗಳೂರು, ಅ.26-ಅರಣ್ಯ ಇಲಾಖೆಯ 60 ಮಂದಿ ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವಲಯ ಅರಣ್ಯಾಧಿಕಾರಿಗಳಾದ ಹೇಮಾವತಿ ಭಟ್ ಅವರನ್ನು ಬೆಂಗಳೂರಿನ ಸಂಶೋಧನಾ ವಲಯಕ್ಕೆ ಬಿ.ಕೆ.ಪುಷ್ಪಾಲತಾ ಅವರನ್ನು ಅರಣ್ಯ ಸಂಶೋಧನೆ ಮತ್ತು ಬಳಕೆ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.
ಎಸ್.ವಿ.ವರುಣ್ಕುಮಾರ್ ಅವರನ್ನು ಹೊಸಕೋಟೆ ಪ್ರಾದೇಶಿಕ ಅರಣ್ಯ ವಲಯಕ್ಕೆ, ಎ.ಪಿ.ಧನಲಕ್ಷ್ಮಿ ಅವರನ್ನು ಕೋಲಾರ ವಿಭಾಗದ ಮಾಲೂರು ಪ್ರಾದೇಶಿಕ ಅರಣ್ಯ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಕೆ.ರಾಜ್ಕುಮಾರ್ ಅವರನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹಾರೋಹಳ್ಳಿ ವನ್ಯಜೀವಿ ವಲಯಕ್ಕೆ, ವಿ.ರವೀಂದ್ರ ಅವರನ್ನು ಮೈಸೂರು ಅರಣ್ಯ ತರಬೇತಿ ಕೇಂದ್ರಕ್ಕೆ, ಪ್ರದೀಪ್ ಪವಾರ್ ಅವರನ್ನು ಚಿತ್ರದುರ್ಗ ವಿಭಾಗದ ಪ್ರಾದೇಶಿಕ ಅರಣ್ಯ ವಲಯಕ್ಕೆ ವರ್ಗಾಯಿಸಲಾಗಿದೆ.
ಬಿ.ಭರತ್ ಅವರು ಚನ್ನಗಿರಿ ಪ್ರಾದೇಶಿಕ ವಲಯಕ್ಕೆ ಹಾಗೂ ಇನ್ನಿತರ ವಿವಿಧ ಅರಣ್ಯಾಧಿಕಾರಿಗಳನ್ನು ಬೇರೆ ಬೇರೆ ಅರಣ್ಯ ವಲಯಗಳಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.