ಬೆಂಗಳೂರು, ಅ.26- ಕನ್ನಡಸೇನೆ ಸಂಘಟನೆಯು ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಈ ಬಾರಿ ಹೊರರಾಜ್ಯದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.31ರಂದು ಹೈದರಾಬಾದ್ನ ಸಾಹಿತ್ಯ ಮಂದಿರ ರಸ್ತೆ, ಲಿಂಗಂಪಲ್ಲಿ, ಕಾಚಿಗುಡದಲ್ಲಿ ಕನ್ನಡಿಗರ ಅಧಿದೇವತೆ ತಾಯಿ ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.
ಅಂದು ಮೆರವಣಿಗೆ ಅಂಗವಾಗಿ ಸಾಂಸ್ಕøತಿಕ ಹಾಗೂ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಹೈದರಾಬಾದ್ನ ಕೃಷ್ಣದೇವರಾಯ ವೇದಿಕೆ, ಕರೋಡಿ ಗುಂಡೂರಾವ್ ವೇದಿಕೆ, ಸಾಹಿತ್ಯ ಮಂದಿರ ರಸ್ತೆ, ಲಿಂಗಂಪಲ್ಲಿ, ಕಾಚಿಗುಡದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಮೆರವಣಿಗೆಗೆ ಸೈಬರಾಬಾದ್ ಪೆÇಲೀಸ್ ಆಯುಕ್ತ ವಿ.ಸಿ.ಸಜ್ಜನರ್ ಚಾಲನೆ ನೀಡಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಎಂ.ಮಹದೇವ್ ಕನ್ನಡದ ಧ್ವಜಾರೋಹಣ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಲೀಂ ಅಹಮದ್, ರಾಜ್ಯ ಉಪಾಧ್ಯಕ್ಷ ಬೊಮ್ಮನಹಳ್ಳಿ ಮುನಿರಾಜುಗೌಡ, ಬೀದರ್ನ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಹೈದರಾಬಾದ್ ಉದ್ಯಮಿಗಳಾದ ಪ್ರತೀಪ್ ಪಟ್ಟಾಡೆ, ಸತೀಶ್ ಬಚ್ಚ, ಚಂದ್ರಹಾಸ್ ಕೊಳಾರಿ, ಬೆಂಗಳೂರು ಪ್ರೆಸ್ಕ್ಲಬ್ ನಿರ್ದೇಶಕ ಎಲ್.ಪಿ.ಬಾಬು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿ ವರ್ಷ ನಮ್ಮ ನಾಡಿನಲ್ಲೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೆವು. ಈ ವರ್ಷ ಹೊರರಾಜ್ಯದಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಲು ಹೈದರಾಬಾದ್ನಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿದ್ದೇವೆ ಎಂದು ಕೆ.ಆರ್.ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಸದಸ್ಯ ಎಂ.ಮಹದೇವ್, ಕನ್ನಡ ಸೇನೆಯ ಸಾಂಸ್ಕøತಿಕ ಘಟಕದ ಕಾರ್ಯಾಧ್ಯಕ್ಷ ವಿನಯ್ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಮುನೇಗೌಡ ಉಪಸ್ಥಿತರಿದ್ದರು.