ಬೆಂಗಳೂರು,ಅ.24- ಮೀ ಟೂ ಆರೋಪಕ್ಕೆ ತಿಥಿ ಚಿತ್ರ ಕಥೆಗಾರ ಈರೇಗೌಡರನ್ನು ಸುತ್ತಿಕೊಂಡಿದೆ.
ಸ್ಯಾಂಡಲ್ವುಡ್ನ ಅಂಗಳದಲ್ಲಿ ಮೀ ಟೂ ಅಭಿಯಾನ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಮತ್ತೊಂದು ಆರೋಪವೂ ಕೇಳಿಬಂದಿದೆ.
ತಿಥಿ ಚಿತ್ರದ ಕಥೆಗಾರ ಈರೇಗೌಡನ ವಿರುದ್ದ ಏಕ್ತಾ ಎಂಬ ಯುವತಿ ಸಿನಿಮಾ ನಟನೆ ಕಲಿಯಲು ಬಂದಿದ್ದ ಬಾಳೆ ಕೆಂಪ ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ವೇಳೆ ಈರೇಗೌಡ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಆಕೆಯ ಬರಹ ಓದಿದ ಜನ ಫೇಸ್ಬುಕ್ನಲ್ಲಿ ಈರೇಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಏಕ್ತಾ ಬೆಂಬಲಕ್ಕೆ ನಿಂತಿದ್ದಾರೆ.