420 ರೂಪಾಯಿ ತಿಂಗಳಿಗೆ ಕಟ್ಟಿ, 15 ಲಕ್ಷ ವಿಮೆ ಪಡೆಯಿರಿ: LICಯ ಅತ್ಯುತ್ತಮ ಪಾಲಿಸಿ!

ಮುಂಬೈ: ಇತ್ತೀಚೆಗೆ ಬಹುತೇಕ ಎಲ್ಲಾ ಮಂದಿ ತಮ್ಮ ಭವಿಷ್ಯವನ್ನು ಧೃಡಗೊಳಿಸಲು ವಿಮೆಗಳನ್ನು ಮಾಡುತ್ತಾರೆ. ತಮಗೇನಾದರೂ ಅಪಾಯವಾದಲ್ಲಿ ತನ್ನ ಕುಟುಂಬ ಯಾವತ್ತೂ ಖುಷಿ ಖುಷಿಯಾಗಿರಬೇಕು ಹಾಗೂ ತಾನಿಲ್ಲದಿದ್ದರೂ ತನ್ನ ಕುಟುಂಬ ಸದಸ್ಯರಿಗೆ ಯಾವುದೇ ಆರ್ಥಿಕ ಸಂಕಷ್ಟ ಬರಬಾರದೆಂಬ ನಿಟ್ಟಿನಲ್ಲಿ ಹೀಗೆ ಮಾಡುತ್ತಾರೆ. ಹೀಗಿರುವಾಗ ಎಲ್ ಐಸಿಯು ನಿಮ್ಮ ಜೊತೆಗಿರಲಿದೆ. ಎಲ್​ಐಸಿಯ ಅನ್​ಮೋಲ್​ ಜೀವನ್​ 2 ಟರ್ಮ್​ ಇನ್ಶೂರೆನ್ಸ್​ ಪ್ಲಾನ್​ ನಿಮಗೆ ಸಹಾಯ ಮಾಡಲಿದೆ. ಎಲ್ಐಸಿಯ ಈ ಯೋಜನೆಯಡಿಯಲ್ಲಿ ಒಂದುವೇಳೆ ಪಾಲಿಸಿದಾರ, ಪಾಲಿಸಿ ಅವಧಿಗೂ ಮುನ್ನ ಸಾವನ್ನಪ್ಪಿದರೆ, ನಾಮಿನಿಗಳಿಗೆ ವಿಮೆಯ ಸಂಪೂರ್ಣ ಹಣವನ್ನು ಪಾವತಿಸಲಾಗುತ್ತದೆ. ಆದರೆ ಇದು ಟರ್ಮ್​ ಪ್ಲಾನ್​ ಆಗಿದೆ, ಹೀಗಾಗಿ ಇದರಿಂದ ಯಾವುದೇ ರೀತಿಯ ಮೆಚ್ಯುರಿಟಿ ಲಾಭ ಸಿಗುವುದಿಲ್ಲ.
ಪ್ರೀಮಿಯಂ ಏನು?
ನಿಮ್ಮ ವಯಸ್ಸು 30 ವರ್ಷವಾಗಿದ್ದರೆ, ಪಾಲಿಸಿ ಅವಧಿ​ 20 ವರ್ಷವಿರುತ್ತದೆ. ಹಾಗೂ ನಿಮ್ಮ ಸಮ್​ ಅಶೂರ್ಡ್​ 15 ಲಕ್ಷವಾಗಿರುತ್ತದೆ.

ಪ್ರೀಮಿಯಂ

  • ವಾರ್ಷಿಕಮೊತ್ತ: 5,345 ರೂಪಾಯಿ
  • ಅರ್ಧವಾರ್ಷಿಕ: 2,727 ರೂಪಾಯಿ
  • ದೈನಿಕಮೊತ್ತ: 14 ರೂಪಾಯಿಗಳು
    ಸಿಗುವ ಲಾಭ:
    ನಿಧನದ ಬಳಿಕ:ಪಾಲಿಸಿ ಅವಧಿಗೂ ಮೊದಲು ಪಾಲಿಸಿದಾರರು ಸಾವನ್ನಪ್ಪಿದರೆ ಅವರ ನಾಮಿನಿಗಳಿಗೆ ವಿಮೆಯ ಪೂರ್ಣ ಮೊತ್ತ ಪಾವತಿಸಲಾಗುತ್ತದೆ.
    ಮೆಚ್ಯೂರಿಟಿ ಲಾಭ: ಈ ಯೋಜನೆಯಡಿಯಲ್ಲಿ ಯಾವುದೇ ರೀತಿಯ ಮೆಚ್ಯುರಿಟಿ ಲಾಭ ಸಿಗುವುದಿಲ್ಲ
    ತೆರಿಗೆ ಲಾಭ: ನಿಮ್ಮ ತೆರಿಗೆಸಹಿತ ಆದಾಯದಿಂದ ಪ್ರತಿವರ್ಷ ಜೀವನ ವಿಮೆಯ 1,50,000 ರೂಪಾಯಿವರೆಗಿನ ಪ್ರೀಮಿಯಂ ಮೊತ್ತಕ್ಕೆ ಆದಾಯ ತೆರಿಗೆಯ ಸೆಕ್ಷನ್​ 80Cಅಡಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅತ್ತ ನಾಮಿನಿಗಳಿಗೆ ಸಿಕ್ಕ ಮೊತ್ತಕ್ಕೂ ಆದಾಯ ತೆರಿಗೆಯ ಸೆಕ್ಷನ್​ 10(10D) ಅಡಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗುತ್ತದೆ.
    ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರಗಳು:
    ನೀವು ಪ್ರೀಮಿಯಂ ಮೊತ್ತ ಸ್ಥಗಿತಗೊಳಿಸಿದರೆ: ಈ ಯೋಜನೆಯಡಿಯಲ್ಲಿ ಒಂದು ವೆಳೆ ನೀವು ಪ್ರೀಮಿಯಂ ಪಾವತಿ ನಿಲ್ಲಿಸಿದರೆ, ನಿಮಗೆ ಉಳಿದ ಪ್ರೀಮಿಯಂ ಮೊತ್ತ ಪಾವತಿಸಲು 30 ದಿನಗಳ ಗ್ರ್ರೆಸ್​ ಸಮಯ ನೀಡಲಾಗುತ್ತದೆ. ಒಂದು ವೇಳೆ ನೀವು ಇದರ ಬಳಿಕವೂ ಪ್ರೀಮಿಯಂ ಪಾವತಿದಿದ್ದಲ್ಲಿ ನಿಮ್ಮ ಪಾಲಿಸಿ ಹಾಗೂ ಇದರಿಂದ ಸಿಗುವ ಎ್ಲಾ ಲಾಭಗಳು ಸ್ಥಗಿತಗೊಳ್ಳಲಿವೆ.
    ಪಾಲಿಸಿ ನವೀಕೃತಗೊಳಿಸಬೇಕಾಗುತ್ತದೆ: ನೀವು ನಿಮ್ಮ ಸ್ಥಗಿತಗೊಂಡ ಪಾಲಿಸಿಯನ್ನು ನವೀಕೃತಗೊಳಿಸಬಹುದು. ಇದಕ್ಕಾಗಿ ನೀವು ಕೊನೆಯದಾಗಿ ಪಾವತಿಸಿದ ಪ್ರೀಮಿಯಂನಿಂದ 2 ವರ್ಷದೊಳಗೆ ಉಳಿದ ಪ್ರೀಮಿಯಂನ್ನು ಪಾವತಿಸಬೇಕು.
    ಸರೆಂಡರ್ಮಾಲು ಇಚ್ಛಿಸಿದರೆ: ಈ ಯೋಜನೆಯಡಿಯಲ್ಲಿ ನೀವು ನಿಮ್ಮ ಪಾಲಿಸಿಯನ್ನು ಸರೆಂಡರ್​ ಮಾಡಿಕೊಳ್ಳಬಹುದು. ಆದರೆ ಇದರಿಂದ ನಿಮಗೆ ಯಾವುದೇ ರೀತಿಯ ಸರೆಂಡರ್​ ಮೊತ್ತ ಸಿಗುವುದಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ