ಯುವರಾಜ್ ಸಿಂಗ್ ತಾಯಿ ಶಬಾನಮ್ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಯಾಕೆ ಗೊತ್ತಾ?

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ತಾಯಿ ಶಬಾನಮ್ ಕೌರ್ ವಂಚನೆ ಮಾಡುವ ಸ್ಕೀಂವೊಂದಕ್ಕೆ ಹೂಡಿಕೆ ಮಾಡಿ ಸುಮಾರು 50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಪ್ರಕರಣವನ್ನ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ.
ಯುವರಾಜ್ ತಾಯಿ ಶಬಾನಮ್ ವಂಚನೆ ಮಾಡಿರುವ ಸಾಧಾನ ಎಂಟರ್‍ಪ್ರೈಸ್‍ಗೆ ಸುಮಾರು ಒಂದು ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದರು. ಸಾಧನಾ ಎಂಟರ್‍ಪ್ರೈಸಸ್ ಶೇ.84 ರಷ್ಟು ವಾರ್ಷಿಕ ಹಣವನ್ನ ನೀಡುವುದಾಗಿ ಭರವಸೆ ನೀಡಿತ್ತು.ಅದ್ಹೇಗೋ ಶಬನಾಮ್ 50 ಲಕ್ಷರೂಪಾಯಿ ಹಣವನ್ನ ಪಡೆದಿದ್ದರು. ಆದರೂ ನಂತರದ ದಿನಗಳಲ್ಲಿ ಶಬಾನಮ್ ಫಂಡ್‍ಗಳನ್ನ ನೀಡುತ್ತಾ ಬಂದಿದ್ದರು. ಇದೀಗ ಯುವರಾಜ್ ತಾಯಿ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ