ಶಬರಿಮಲೆಗೆ ಮಹಿಳೆಯರ ಪ್ರವೇಶ; ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

ನವದೆಹಲಿ: ಸುಪ್ರೀಂಕೋರ್ಟ್​ನ ಪಂಚಸದಸ್ಯ ಪೀಠ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಕುರಿತಾಗಿ ನೀಡಿರುವ ತೀರ್ಪು ಸದ್ಯ ಭಕ್ತರಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ.

ಸುಪ್ರೀಂನ ತೀರ್ಪಿಗೆ ಮೇಲ್ಮನವಿ ಸಲ್ಲಿಕೆಯಾಗಿದ್ದು,  ಈ ಮೂಲಕ ಸರ್ವೋಚ್ಛ ನ್ಯಾಯಾಲಯ ಭಕ್ತರ ಮನಸ್ಥಿತಿಯನ್ನು ಅರಿಯುವಲ್ಲಿ ವಿಫಲವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸೆ.28 ದೀಪಕ್​ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು. ಪ್ರವೇಶ ನಿರ್ಬಂಧ ಸಮಾನತೆಗೆ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟು 800 ವರ್ಷ ಹಳೆಯ ಸಂಪ್ರದಾಯವನ್ನು ನಿಷೇಧಿಸಿ ಐತಿಹಾಸಿಕ ತೀರ್ಪು ನೀಡಿತ್ತು.

ತೀರ್ಪಿನ ಬಳಿಕ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದರ ಬೆನ್ನಲ್ಲೇ ತೀವ್ರ ಹೋರಾಟ ಆರಂಭವಾಗಿತ್ತು. ಸದ್ಯ ಈ ಹೋರಾಟದ ಫಲವಾಗಿ ಮೇಲ್ಮನವಿ ಸಲ್ಲಿಕೆಯಾಗಿದೆ. ಅಯ್ಯಪ್ಪ ಭಕ್ತರ ಅಸೋಸಿಯೇಷನ್​ನ ಮುಖ್ಯಸ್ಥೆ ಶೈಲಜಾ ವಿಜಯನ್ ಮೇಲ್ಮನವಿ ಸಲ್ಲಿಸಿದ್ದಾರೆ.
ಅಯ್ಯಪ್ಪ ಭಕ್ತರು ಭಾನುವಾರದಂದು ಚೆನ್ನೈನಲ್ಲಿ ಹೋರಾಟ ಹಮ್ಮಿಕೊಂಡಿದ್ದರು. ಅಯ್ಯಪ್ಪ ನಾಮಜಪ ಯಾತ್ರ ಎನ್ನುವ ರ್ಯಾಲಿ ದೆಹಲಿಯ ಜಂತರ್​ ಮಂತರ್​​ ನಡೆದಿತ್ತು. ಸದ್ಯ ಮೇಲ್ಮನವಿ ಸಲ್ಲಿಕೆಯ ಮೂಲಕ ಶಬರಿಮಲೆಯ ವಿವಾದ ಉನ್ನತ ಪೀಠಕ್ಕೆ ವರ್ಗಾವಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ