ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ: ಸಿಎಂ ಸಭೆಗೆ ಗೈರಾದ ತಂತ್ರಿಗಳು ಹೇಳಿದ್ದೇನು…?

ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಿನ್ನಲೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ದೇವಾಲಯದ ತಂತ್ರಿ(ಮುಖ್ಯ ಪುರೋಹಿತರು)ಗಳನ್ನು ಸಭೆಗೆ ಆಹ್ವಾನಿಸಿದ್ದು, ಆದರೆ ಸಿಎಂ ಸಭೆಗೆ ತಂತ್ರಿಗಳು ಗೈರು ಹಾಜರಾಗಿದ್ದಾರೆ.

ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಕೇರಳ ಸರ್ಕಾರ ಮೊದಲು ನಿರ್ಧಾರ ತೆಗೆದುಕೊಳ್ಳಲಿ. ನಂತರ ನಾವು ಸಿಎಂ ಕರೆದಿರುವ ಸಭೆಗೆ ಮಾತನಾಡಲು ಬರುತ್ತೇವೆ ಎಂದು ದೇಗುಲ ಮುಖ್ಯ ತಂತ್ರಿ ಮೋಹಾನಾರು ಕಂದಾರಾರು ಹೇಳಿದ್ದು, ದೇವಸ್ಥಾನ ವಿಚಾರದಲ್ಲಿ ಅವರ ಮಾತನ್ನೇ ಅಂತಿಮ ನಿರ್ಧಾರ ಎಂದು ಪರಿಗಣಿಸಲಾಗಿದೆ.

ಈಗಾಗಲೇ ಸಿಎಂ ಪಿಣರಾಯ್ ವಿಜಯನ್ ಅವರು ಸುಪ್ರೀಂ ತೀರ್ಪನ್ನು ಪಾಲಿಸಲು ಬದ್ಧರಾಗಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ದೇವಸ್ಥಾನದ ಮುಖ್ಯತಂತ್ರಿಗಳು ಸುಪ್ರೀಂ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಅಲ್ಲಿನ ದೈವತ್ವಕ್ಕೆ ಹಾನಿಯಾಗುತ್ತದೆ. ಸಂಪ್ರದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಈ ವಿಚಾರದಲ್ಲಿ ರಾಜಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ