ಹೈಟಿಯಲ್ಲಿ ಪ್ರಬಲ ಭೂಕಂಪ: 11 ಜನ ಬಲಿ

ಪೋರ್ಟ್‌ ಆ ಪ್ರಿನ್ಸ್: ಹೈಟಿ ವಾಯುವ್ಯ ಕರಾವಳಿ ಭಾಗದಲ್ಲಿ ತಡರಾತ್ರಿ ಸಂಭವಿಸಿದ ಪಭಲ ಭೂಕಂಪಕ್ಕೆ 11 ಜನರು ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಹೈಟಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿ ದ್ದು, 11 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಪೋರ್ಟ್‌ ಆ ಪ್ರಿನ್ಸ್‌ನ ಪಶ್ಚಿಮಕ್ಕೆ 12 ಮೈಲು ದೂರದ ಸುಮಾರು 7 ಮೈಲು ಆಳ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆಯ ವರದಿ ತಿಳಿಸಿದೆ.

ವಾಯುವ್ಯ ಪ್ರದೇಶ ಪೊಲೀಸ್‌ ಮುಖ್ಯಸ್ಥ ಜಾಕ್ಸನ್‌ ಹಿಲಾರೆ ಅವರು, ‘ನಗರದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರಬಹುದು’ ಎಂದು ಮಾಹಿತಿ ನೀಡಿದ್ದಾರೆ. ಇನ್ನುಳಿದ ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ

ಹೈಟಿ ಅಧ್ಯಕ್ಷ ಜೊವೆನಿಲ್‌ ಮೊಯ್ಸೆ, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಜನರು ಧೃತಿಗೆಡದಂತೆ ಕರೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ