ಪೋರ್ಟ್ ಆ ಪ್ರಿನ್ಸ್: ಹೈಟಿ ವಾಯುವ್ಯ ಕರಾವಳಿ ಭಾಗದಲ್ಲಿ ತಡರಾತ್ರಿ ಸಂಭವಿಸಿದ ಪಭಲ ಭೂಕಂಪಕ್ಕೆ 11 ಜನರು ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಹೈಟಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿ ದ್ದು, 11 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಪೋರ್ಟ್ ಆ ಪ್ರಿನ್ಸ್ನ ಪಶ್ಚಿಮಕ್ಕೆ 12 ಮೈಲು ದೂರದ ಸುಮಾರು 7 ಮೈಲು ಆಳ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆಯ ವರದಿ ತಿಳಿಸಿದೆ.
ವಾಯುವ್ಯ ಪ್ರದೇಶ ಪೊಲೀಸ್ ಮುಖ್ಯಸ್ಥ ಜಾಕ್ಸನ್ ಹಿಲಾರೆ ಅವರು, ‘ನಗರದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರಬಹುದು’ ಎಂದು ಮಾಹಿತಿ ನೀಡಿದ್ದಾರೆ. ಇನ್ನುಳಿದ ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ
ಹೈಟಿ ಅಧ್ಯಕ್ಷ ಜೊವೆನಿಲ್ ಮೊಯ್ಸೆ, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಜನರು ಧೃತಿಗೆಡದಂತೆ ಕರೆ ನೀಡಿದ್ದಾರೆ.