ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭುವನೇಶ್ವರ್: ಸ್ವದೇಶಿ ತಂತ್ರಜ್ನಾದ ಮೂಲಕ ಸಿದ್ಧಪಡಿಸಲಾದ ನೆಲದಿಂದ ನೆಲಕ್ಕೆ ಚಿಮ್ಮುವ ಪೃಥ್ವಿ-2 ಕ್ಷಿಪಣಿ ರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

ಕಳೆದ 13 ದಿನಗಳಲ್ಲಿ ಪೃಥ್ವಿ ಕ್ಷಿಪಣಿಯ ಎರಡನೇ ಪರೀಕ್ಷೆ ಇದಾಗಿದ್ದು, ಸತತ ಎರಡನೇ ಪರೀಕ್ಷೆಯಲ್ಲೂ ಹಾರಾಟ ಯಶಸ್ವಿಯಾಗಿದೆ. ಒಡಿಸಾದ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, 350 ಕಿಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.

ಡಿಆರ್ ಡಿಒ ದಿಂದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅವಳಿ ಇಂಜಿನಿನ್ ನ್ನು ಹೊಂದಿದೆ. ಹೆಚ್ಚಿನ ನಿಖರತೆಗಾಗಿ ಪರಮಾಣು ಸಿಡಿತಲೆ ರೆಡಾರ್ ಟರ್ಮಿನಲ್ ಗೈಡೆನ್ಸ್ ಸಿಸ್ಟಮ್ ನ್ನು ಅಳವಡಿಕೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ