ರಾತ್ರಿ ವೇಳೆ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಖದೀಮರ ಬಂಧನ

ಬೆಂಗಳೂರು, ಅ.5- ರಾತ್ರಿ ವೇಳೆ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಹೆಬ್ಬಾಳ ಪೆÇಲೀಸರು ಬಂಧಿತರಿಂದ 2.5 ಲಕ್ಷ ಮೌಲ್ಯದ 34 ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್‍ಬಿಆರ್ ಬಡಾವಣೆ ನಿವಾಸಿ ಮಹಮ್ಮದ್ ದಾವೂದ್ (37) ಹಾಗೂ ಕೆಜಿ ಹಳ್ಳಿ ನಿವಾಸಿ ಜಾಕಿರ್ ಹುಸೇನ್ (44) ಬಂಧಿತ ಆರೋಪಿಗಳು.
ಇತ್ತೀಚೆಗೆ ಸುಲ್ತಾನ್‍ಪಾಳ್ಯ ಮುಖ್ಯರಸ್ತೆ, ಭುವನೇಶ್ವರಿ ನಗರದಲ್ಲಿರುವ ಗೌತಮ್‍ಚಂದ್ ಎಂಬುವವರ ಚಂದ್ರ ಎಲೆಕ್ಟ್ರಾನಿಕ್ ಮೊಬೈಲ್ ಅಂಗಡಿ ಬೀಗ ಮುರಿದು ಅಂಗಡಿಯಲ್ಲಿದ್ದ ನಗದು ಮತ್ತು ಮೊಬೈಲ್ ಫೆÇೀನ್ ಕಳವು ಮಾಡಿದ್ದರು.

ಈ ಕುರಿತಂತೆ ಗೌತಮ್‍ಚಂದ್ ನೀಡಿದ ದೂರಿನ ಆಧಾರದ ಮೇರೆಗೆ ಜೆಸಿ ನಗರ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಹೆಬ್ಬಾಳ ಇನ್ಸ್‍ಪೆಕ್ಟರ್ ಆರ್.ಎಸ್.ಟಿ.ಖಾನ್ ಮತ್ತಿತರ ಸಿಬ್ಬಂದಿ ವರ್ಗದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ರಾತ್ರಿ ವೇಳೆ ಅಂಗಡಿಗೆ ಕನ್ನ ಹಾಕಿ ಮೊಬೈಲ್ ಫೆÇೀನ್ ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಇವರಿಂದ ವಿವಿಧ ಕಂಪೆನಿಗಳ 34 ಮೊಬೈಲ್ ಫೆÇೀನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ