ಸುಲಿಗೆ, ಕನ್ನಕಳವು, ಮನೆಗಳವು ಮತ್ತು ದ್ವಿಚಕ್ರ ವಾಹನಗಳನ್ನು ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳ ಭಂಧನ

ಬೆಂಗಳೂರು, ಅ.5-ಸುಲಿಗೆ, ಕನ್ನಕಳವು, ಮನೆಗಳವು ಮತ್ತು ದ್ವಿಚಕ್ರ ವಾಹನಗಳನ್ನು ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚಾಮರಾಜಪೇಟೆ ಠಾಣೆ ಪೆÇಲೀಸರು ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾರ್ವತಿಪುರದ ಮಹಮ್ಮದ್ ಯೂನಸ್ (26) ಹಾಗೂ ಬನಶಂಕರಿಯ ಮಹಮ್ಮದ್ ರಿಯಾಜ್ (31) ಬಂಧಿತ ಆರೋಪಿಗಳಾಗಿದ್ದು, ಇವರಿಂದ 4 ಲಕ್ಷ ರೂ. ಬೆಲೆಬಾಳುವ 63 ಗ್ರಾಂ ತೂಕದ ಚಿನ್ನಾಭರಣ, ಐದು ದ್ವಿಚಕ್ರ ವಾಹನ ಮತ್ತು 6500ರೂ. ನಗದನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ಚಾಮರಾಜಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದ ಕಳವು ಪ್ರಕರಣಗಳ ಬಗ್ಗೆ ಪೆÇಲೀಸರು ತನಿಖೆ ತೀವ್ರಗೊಳಿಸಿದ್ದರು.
ಸೆ.27ರಂದು ಸಂಜೆ ಮೈಸೂರು ರಸ್ತೆಯ ಮೋಮಿನಾಪುರ ಮಸೀದಿಯ ಗೇಟ್ ಬಳಿ ವ್ಯಕ್ತಿಯೊಬ್ಬ ಸಾರ್ವಜನಿಕರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸುತ್ತಿದ್ದುದನ್ನು ಗಮನಿಸಿದ ಪೆÇಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು.

ಈತ ಮಹಮ್ಮದ್ ಯೂನಸ್ ಎಂದು ತಿಳಿದು ಈತ ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಆರೋಪಿ ಮಹಮ್ಮದ್ ರಿಯಾಜ್‍ನನ್ನು ಪೆÇಲೀಸರು ಬಂಧಿಸಿದಾಗ ಇವರಿಬ್ಬರು ವಿವಿಧ ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆಸಿದ್ದ ಸುಲಿಗೆ, ಕಳ್ಳತನ, ಮನೆಗಳವು ಹಾಗೂ ದ್ವಿಚಕ್ರ ವಾಹನ ಅಪಹರಣ ಪ್ರಕರಣಗಳು ಬೆಳಕಿಗೆ ಬಂದವು.

ಇವರು ಚಾಮರಾಜಪೇಟೆ, ಜೆಪಿ ನಗರ, ಚಂದ್ರಾ ಲೇಔಟ್, ಬ್ಯಾಟರಾಯನಪುರ, ಶಂಕರಮಠ ಹಾಗೂ ಸಿದ್ದಾಪುರ ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸುಲಿಗೆ, ಕನ್ನಗಳವು, ದ್ವಿಚಕ್ರ ವಾಹನಗಳ ಅಪಹರಣ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ.
ಮಹಮ್ಮದ್ ಯೂನಸ್ ಹಳೆ ಆರೋಪಿಯಾಗಿದ್ದು, ಮುಂಬೈನ ಮಹಮ್ಮದ್ ರಿಯಾಜ್ ಜತೆ ಸೇರಿಕೊಂಡು ಈ ಹಿಂದೆ ಸರಗಳ್ಳತನ, ಸುಲಿಗೆ, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ.

ಈ ಹಿಂದೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತನ ವಿರುದ್ಧ ಎನ್‍ಬಿಡಬ್ಲ್ಯೂ ವಾರೆಂಟ್ ಮತ್ತು ಘೋಷಿತ ಅಪರಾಧಿ ಎಂದು ನ್ಯಾಯಾಲಯದಲ್ಲಿ ದಾಖಲಾಗಿತ್ತು.
ಈಗ ಮತ್ತೆ ಯೂನಸ್ ಮತ್ತು ರಿಯಾಜ್‍ನನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಉಪ ಪೆÇಲೀಸ್ ಆಯುಕ್ತರಾದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪವಿಭಾಗದ ಎಸಿಪಿ ಮಹಾಂತ್‍ರೆಡ್ಡಿ ನೇತೃತ್ವದಲ್ಲಿ ಪೆÇಲೀಸ್ ಇನ್ಸ್‍ಪೆಕ್ಟರ್ ಎಸ್.ಆರ್.ತನ್ವೀರ್, ಸಬ್‍ಇನ್ಸ್‍ಪೆಕ್ಟರ್ ಕೆ.ಎಸ್.ಶಶಿಧರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ