ಅಮೆರಿಕಾ ಮೂಲದ ಅತ್ಯಾಧುನಿಕ ಮತ್ತು ವೇಗದ ಸಾರಿಗೆ ವ್ಯವಸ್ಥೆ ಅನಾವರಣ

ಸ್ಯಾನ್‍ಫ್ರಾನ್ಸಿಸ್ಕೋ. ಅ.4-ಅಮೆರಿಕ ಮೂಲದ ಹೈಪರ್‍ಲೂಪ್ ಟ್ರಾನ್ಸ್‍ಪೆÇರ್ಟೆಷನ್ ಟೆಕ್ನಾಲಜೀಸ್(ಹೈಪರ್‍ಲೂಪ್‍ಟಿಟಿ) ತನ್ನ ಅತ್ಯಾಧುನಿಕ ಮತ್ತು ಅತ್ಯಂತ ವೇಗದ ಸಾರಿಗೆ ವ್ಯವಸ್ಥೆ(ಹೈಪರ್‍ಲೂಪ್ ಪ್ರಯಾಣಿಕರ ಕ್ಯಾಪ್ಸ್ಯೂಲ್ ವಾಹನ) ಅನಾವರಣಗೊಳಿಸಿದೆ.
ಸ್ಪೇನ್‍ನ ಪ್ಯುರ್ಟೊ ಡಿ ಸಾಂತಾ ಮಾರಿಯಾದಲ್ಲಿ ಪ್ರಯೋಗಕ್ಕೆ ಒಳಪಡಿಸಲಾದ ಸೂಪರ್‍ಸ್ಪೀಡ್ ಪ್ಯಾಸೆಂಜರ್ ಕ್ಯಾಪ್ಸ್ಯೂಲ್ ಗಂಟೆಗೆ 1223 ಕಿ.ಮೀ. (760 ಮೈಲಿಗಳು) ವೇಗದಲ್ಲಿ ಚಲಿಸಲಿದೆ. ಈ ಅತ್ಯಾಧುನಿಕ ವಾಹನ ಮುಂದಿನ ವರ್ಷ ಪ್ರಯಾಣಿಕರ ಸೇವೆಗೆ ಸಿದ್ದವಾಗಲಿದೆ.
150 ಅಡಿ(32 ಮೀಟರ್) ಉದ್ದದ 5 ಟನ್ನುಗಳಷ್ಟು ತೂಕದ ಕ್ವಿನ್‍ಟೆರೋ ಇನ್ ಹೆಸರಿನ ಈ ಪ್ಯಾಸೆಂಜರ್ ಪಾಡ್‍ನಲ್ಲಿ 28 ರಿಂದ 40 ಜನರು ಪ್ರಯಾಣಿಸಬಹುದು. ಅತ್ಯಂತ ದೂರದ ಮಾರ್ಗವನ್ನು ಅತಿ ಕಡಿಮೆ ಸಮಯದಲ್ಲಿ ತಲುಪಲು ಇದು ಸಹಕಾರಿ. ಹೈಪರ್‍ಲೂಪ್ ಟಿಟಿ ಚಲಿಸಲು ಪ್ರತ್ಯೇಕ ಮಾರ್ಗದ ಅಗತ್ಯವಿದ್ದು, ಸಿದ್ದತೆಗಳು ಭರದಿಂದ ಸಾಗಿದೆ.
ಇದರಲ್ಲಿ 72 ಸೆನ್ಸೊರ್‍ಗಳು, 35,00 ರಿವಿಟ್‍ಗಳು ಹಾಗೂ 7,200 ಮೀಟರ್‍ಗಳ ಫೈಬರ್‍ಗಳನ್ನು ಹೊಂದಿದ್ದು ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ವಿಶೇಷ ಸಾಮಗ್ರಿಗಳನ್ನು ಬಳಸಲಾಗಿದೆ.
ಹೈಸ್ಪೀಡ್ ಮತ್ತು ಬುಲೆಟ್ ರೈಲುಗಳಿಗಿಂತಲೂ ಅತ್ಯಧಿಕ ವೇಗದಲ್ಲಿ ಹೈಪರ್‍ಲೂಪ್ ಚಲಿಸಲಿದೆ. ಸ್ಪೇನ್ ಮತ್ತು ಅಮೆರಿಕ ನಂತರ ಚೀನಾದ ಗುಯಿಔವ್ ಪ್ರಾಂತ್ಯದಲ್ಲೂ ಎಚ್‍ಟಿಟಿ ಕಾರ್ಯಾರಂಭ ಮಾಡಲಿದೆ.
ಆಂಧ್ರದಲ್ಲೂ ಹೈಪರ್‍ಲೂಪ್ ಜಾರಿಗೆ ಪ್ರಸ್ತಾಪ :
ಆಂಧ್ರಪ್ರದೇಶದ ಅನಂತಪುರಂ-ಅಮರಾವತಿ-ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಭಾಗವಾಗಿ ಗಂಟೆಗೆ 700 ರಿಂದ 800 ಕಿ.ಮೀ. ವೇಗದ ಹೈಪರ್‍ಲೂಪ್‍ನನ್ನು ಸ್ಥಾಪಿಸಲು ಹೈಪರ್‍ಲೂಟ್ ಟಿಟಿ ಸಂಸ್ಥೆ ಮೇನಲ್ಲಿ ಪ್ರಸ್ತಾವನೆ ಸಲ್ಲಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ