ಚೊಚ್ಚಲ ಟೆಸ್ಟ್ ಪಂಧ್ಯದಲ್ಲೆ ಶತಕ ಸಿಡಿಸಿದ ಪೃಥ್ವಿ ಶಾ

Rajkot: Indian batsman Prithvi Shaw celebrates his century on day one of the 1st test cricket match against West Indies, in Rajkot, Thursday, Oct 4, 2018. Shaw becomes the youngest Indian cricketer to score 100 runs on on Test debut. (PTI Photo/Shashank Parade) (PTI10_4_2018_000037B)

ರಾಜ್‍ಕೋಟ್, ಅ.4- ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ ಪೃಥ್ವಿ ಶಾ ಇಂದು ರಾಜ್‍ಕೋಟ್ ಅಂಗಳದಲ್ಲಿ ಮಿಂಚು ಹರಿಸಿದ್ದಾರೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಇಂದು ವೆಸ್ಟ್ ಇಂಡೀಸ್ ವಿರುದ್ಧ ಆರಂಭಗೊಂಡ ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ. ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.
ಇಂದು ಟಾಸ್ ಗೆದ್ದು ವಿರಾಟ್ ಕೊಹ್ಲಿ ಪಡೆ ಬ್ಯಾಟಿಂಗ್ ಆರಂಭಿಸಿದರು. ಪೃಥ್ವಿ ಶಾ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಅವರು ಆರಂಭಿಕ ಬ್ಯಾಟ್ಸ್‍ಮೆನ್ ಆಗಿ ಕಣಕ್ಕಿಳಿದರು.
ತಂಡದ ಮೊತ್ತ ಮೂರು ರನ್‍ಗಳಾಗುವಷ್ಟರಲ್ಲೇ ಗೇಬ್ರಿಯಲ್ ಅವರ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದು ಔಟಾದಾಗ ಭಾರತ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು.
ನಂತರ ಬಂದ ತೇಜೇಶ್ವರ ಪೂಜಾರ ಜತೆಗೂಡಿದ ಪೃಥ್ವಿ ಶಾ ವಿಂಡೀಸ್ ಬೌಲರ್‍ಗಳ ಬೆವರಿಳಿಸಿದರು. ನೋಡು ನೋಡುತ್ತಿದ್ದಂತೆಯೇ ತಂಡದ ಮೊತ್ತ ಏರಿಕೆಯ ಜತೆಗೆ ರನ್ ವೇಗವೂ ಹೆಚ್ಚಿತು.
ಕಲಾತ್ಮಕ ಆಟ ಎಲ್ಲರ ಮೆಚ್ಚುಗೆ ಪಡೆಯಿತು. ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಬ್ಯಾಟ್ ಬೀಸಿದ ಈ 8ರ ಹರೆಯದ ಹುಡುಗನ ತಾಳ್ಮೆ ಮತ್ತು ಸಮಯೋಚಿತ ಆಟ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಭೋಜನ ವಿರಾಮದ ವೇಳೆಗೆ 133/1 ರನ್‍ಗಳನ್ನು ಕಲೆ ಹಾಕಿದ್ದ ಈ ಜೋಡಿ ನಂತರ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. 99 ಚೆಂಡುಗಳಲ್ಲೇ ತನ್ನ ಚೊಚ್ಚಲ ಶತಕ ಸಿಡಿಸಿದ ಪೃಥ್ವಿ ಬ್ಯಾಟ್ ಮೇಲೆತ್ತಿ ಡ್ರೆಸ್ಸಿಂಗ್ ರೂಂನತ್ತ ತೋರುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಸುಮಾರು ಹೊತ್ತು ಚಪ್ಪಾಳೆ ತಟ್ಟಿ ಯುವ ಆಟಗಾರನಿಗೆ ಪೆÇ್ರೀ ನೀಡಿದರು.
ಉತ್ತಮ ಜತೆಯಾಟವನ್ನು ಮುರಿಯಲು ವೆಸ್ಟ್‍ಇಂಡೀಸ್‍ನ ನಾಯಕ ಡೌರಿಚ್ ನಡೆಸಿದ ಎಲ್ಲಾ ತಂತ್ರಗಾರಿಕೆಯು ವಿಫಲವಾಗಿತ್ತು.
ಪೃಥ್ವಿ ದಾಖಲೆ: ಹತ್ತು ವರ್ಷದಲ್ಲಿ ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಭಾರತೀಯ ಆಟಗಾರ.
ಪಾದಾರ್ಪಣೆ ಪಂದ್ಯದಲ್ಲೇ ಅತಿ ವೇಗದ ಶತಕ.
ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ವಿಶ್ವದ ಮೂರನೆ ಆಟಗಾರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ